ವೀರಾಜಪೇಟೆ, ಜು. ೨೭: ಇಲ್ಲಿನ ಲಯನ್ಸ್ ಕ್ಲಬ್‌ನ ೨೦೨೨-೨೩ ನೇ ಸಾಲಿನ ಅಧ್ಯಕ್ಷರಾಗಿ ಪುಟ್ಟಿಚಂಡ ನರೇಂದ್ರ ಆಧಿಕಾರ ವಹಿಸಿಕೊಂಡರು.

ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ಜಿ.ಎಲ್.ಟಿ. ಸಂಯೋಜಕ ಪ್ರೀತಮ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯದರ್ಶಿಯಾಗಿ ಅಣ್ಣಳಪಂಡ ಅಜೀತ್, ಕೋಶಾಧಿಕಾರಿಯಾಗಿ ಬಲ್ಲಚಂಡ ಗಣಪತಿ ಸೇರಿದಂತೆ ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ, ವಲಯ ಅಧ್ಯಕ್ಷ ಮುಕ್ಕಾಟಿರ ವಿನಯ್, ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಹಾಜರಿದ್ದರು.