ಮಡಿಕೇರಿ, ಜು. ೨೭: ಪದವಿಪೂರ್ವ ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಹಾಕಿ ಕ್ರೀಡಾ ಕೂಟವು ಭಾರತೀಯ ಕ್ರೀಡಾ ಪ್ರಾಧಿಕಾರದ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚಿದಾನಂದ, ಸೋಮಶೇಖರ ದೈಹಿಕ ಶಿಕ್ಷಣ ಉಪನ್ಯಾಸಕರಾದ ಗಿರಿಧರ್, ನಾಚಪ್ಪ, ಜಾನಕಿ ಅವರು ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ ಸೈಂಟ್ ಜೋಸೆಫ್ ಪದವಿಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆಯಿತು. ನಾಪೋಕ್ಲು ಸರ್ಕಾರಿ ಪ.ಪೂ. ಕಾಲೇಜಿನ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ನಗರದ ಸರ್ಕಾರಿ ಪ.ಪೂ. ಕಾಲೇಜಿನ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು. ಸೈಂಟ್ ಮೈಕೆಲ್ ಪದವಿಪೂರ್ವ ಕಾಲೇಜಿನ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.