ಮಡಿಕೇರಿ, ಜು. ೨೭ : ಆದಿಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬAಧಿತ ಸಮುದಾಯದ ಯುವಕ ಯುವತಿಯರಿಗೆ ೨೦೨೨-೨೩ ನೇ ಸಾಲಿನಲ್ಲಿ ಟೆಲಿವಿಷನ್ ಪತ್ರಿಕೋದ್ಯಮ, ವೀಡಿಯೋ, ಕ್ಯಾಮರಮನ್, ನಿರೂಪಣೆ, ವರದಿಗಾರಿಕೆ, ಕಾಫಿ ಎಡಿಟರ್, ಬುಲೆಟಿಂಗ್ ಪ್ರೊಡ್ಯೂಸರ್ ತರಬೇತಿ ನೀಡಲಾಗುವುದು.

ಜಿಲ್ಲಾ ಕಚೇರಿಯಿಂದ ಅರ್ಜಿ ಪಡೆದು ದಾಖಲೆಗಳೊಂದಿಗೆ ಆಗಸ್ಟ್, ೧೦ ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ನಿಯಮಿತ, ರೇಸ್‌ಕೋರ್ಸ್ ರಸ್ತೆ, ಹೊಸಬಡಾವಣೆ ಮಡಿಕೇರಿ, ಕೊಡಗು ಜಿಲ್ಲೆ, ಇಲ್ಲಿಗೆ ದ್ವಿಪ್ರತಿಯಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ.೦೮೨೭೨-೨೨೮೮೫೭ ನ್ನು ಸಂಪರ್ಕಿಸಬಹುದು ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದ್ದಾರೆ.