ಮಡಿಕೇರಿ, ಜು. ೨೭ : ನಗರದ ಹಳೆ ಖಾಸಗಿ ಬಸ್ ನಿಲ್ದಾಣ, ಶ್ರೀನಿಕೇತದ ಶ್ರೀ ಸದ್ಗುರು ವಿದ್ಯಾ ಸಂಸ್ಥೆಯ, ಶ್ರೀ ಸದ್ಗುರು ಕೌಶಲ್ಯ ತರಬೇತಿ ಕೇಂದ್ರವು ಕರ್ನಾಟಕ ಕೌಶಲ್ಯ ಇಲಾಖೆಯಿಂದ ನೋಂದಣಿಯಾಗಿದ್ದು, ವಿವಿಧ ವೃತ್ತಿ ವೃತ್ತಿಪರ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಈ ಸಂಬAಧವಾಗಿ ಟೈಲರಿಂಗ್ ತರಬೇತಿ (ಮೆಷಿನ್ ಆಪರೇಟರ್ ಮತ್ತು ಸೆಲ್ಫ್À ಎಂಪ್ಲಾಯಿಡ್) ವೃತ್ತಿ ತರಬೇತಿಗಳನ್ನು ಆಗಸ್ಟ್, ೧೦ ರಿಂದ ಪ್ರಾರಂಭಿಸಲಾಗುವುದು. ತಕ್ಷಣ ನೋಂದಯಿಸಿಕೊಳ್ಳಲು ಕೋರಿದೆ. ಈ ತರಬೇತಿಗೆ ಕೇವಲ ೩೦ (ಪ್ರತೀ ತರಬೇತಿಗೆ) ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ ಎಂದು ಸಂಸ್ಥೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಕಾರ್ಯದರ್ಶಿ ರಾಮಪ್ರಸಾದ್ ೯೪೪೮೦೮೦೯೦೩ ಅಥವಾ ಕೇಂದ್ರ ವ್ಯವಸ್ಥಾಪಕರು ನಜ್ಮ ೭೩೪೯೦೭೭೬೮೫ ನ್ನು ಸಂಪರ್ಕಿಸಬಹುದು ಎಂದು ವ್ಯವಸ್ಥಾಪಕ ರಾಮಪ್ರಸಾದ್ ಅವರು ತಿಳಿಸಿದ್ದಾರೆ.