ಗೋಣಿಕೊಪ್ಪ ವರದಿ, ಜು. ೨೭: ಸ್ವಾತಂತ್ರೊö್ಯÃತ್ಸವದ ಪ್ರಯುಕ್ತ ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲೆ ವತಿಯಿಂದ ಆಗಸ್ಟ್ ೫ ರಂದು ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಟ್ಟದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.
ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಬೆಳಗ್ಗೆ ೧೦.೩೦ ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದ್ದು, ಎಲ್ಲ್ಲಾ ವಿಭಾಗದಲ್ಲೂ ದೇಶಭಕ್ತಿ ಗೀತೆಯನ್ನು ಕನ್ನಡ ಅಥವಾ ಹಿಂದಿ ಭಾಷೆಯಲ್ಲಿ ಹಾಡಬಹುದಾಗಿದೆ. ಭಾಷಣ ಸ್ಪರ್ಧೆ ಪ್ರಾಥಮಿಕ ವಿಭಾಗಕ್ಕೆ ಗರಿಷ್ಠ ೪ ನಿಮಿಷ, ಪ್ರೌಢ ಮತ್ತು ಪಿಯುಸಿ ವಿಭಾಗಕ್ಕೆ ಗರಿಷ್ಠ ೫ ನಿಮಿಷ ಸಮಯದ ಮಿತಿ ನಿಗದಿಪಡಿಸಲಾಗಿದೆ.
ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಕನ್ನಡ ಅಥವಾ ಹಿಂದಿ ಭಾಷೆಯಲ್ಲಿ ದೇಶಭಕ್ತಿ ಗೀತೆ, ೧-೪ ನೇ ತರಗತಿ ವಿಭಾಗಕ್ಕೆ ‘ನಾನು ಪ್ರಧಾನಿಯಾದರೇ’ ಎಂಬ ವಿಷಯದಲ್ಲಿ ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಭಾಷಣ ನಡೆಯಲಿದೆ. ೫-೭ ನೇ ತರಗತಿವರೆಗೆ ‘ದೇಶದ ಪ್ರಗತಿಯಲ್ಲಿ ಗ್ರಂಥಗಳ ಪಾತ್ರ’ ವಿಷಯದಲ್ಲಿ ಭಾಷಣ, ೮-೧೦ ನೇ ತರಗತಿಗೆ ‘ಭವ್ಯ ಪರಂಪರೆಯ ಸ್ವತಂತ್ರ ಭಾರತದ ಅಮೃತ ಮಹೋತ್ಸವ’ ವಿಷಯದಲ್ಲಿ ಭಾಷಣ, ಪಿಯುಸಿ ವಿದ್ಯಾರ್ಥಿಗಳಿಗೆ ‘ಅಜಾದಿ ಕ ಅಮೃತ ಮಹೋತ್ಸವವು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಫಲವಾಗಿದೆ’ ಎಂಬ ವಿಷಯದಲ್ಲಿ ಭಾಷಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೦೮೨೭೪- ೨೪೭೪೯೨ ಸಂಪರ್ಕಿಸುವAತೆ ಶಾಲೆಯ ಪ್ರಕಟಣೆ ತಿಳಿಸಿದೆ.