ಸುಂಟಿಕೊಪ್ಪ: ಇಲ್ಲಿನ ಮೀನಾಕ್ಷಮ್ಮ ಮಂಜನಾಥಯ್ಯ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಉಪ ತಹಶೀಲ್ದಾರ್ ಶಿವಪ್ಪ ವಹಿಸಿ ಮಾತನಾಡಿ, ನಮ್ಮ ದೇಶಕ್ಕಾಗಿ ಪ್ರಾಣವನ್ನು ತೆತ್ತು ದೇಶವನ್ನು ರಕ್ಷಿಸುವ ಸೈನಿಕರ ಸೇವೆಯನ್ನು ಸದಾ ನೆನಪಿಸಿ ಗೌರವಿಸಬೇಕೆಂದರು. ಸುಂಟಿಕೊಪ್ಪ ಹೋಬಳಿ ಕಂದಾಯ ಪರಿವೀಕ್ಷಕÀ ಪ್ರಶಾಂತ್, ಮಾಜಿ ಸೈನಿಕರಾದ ಅಂತೋನಿ ರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಬ್ಬೀರ್ ಹುತಾತ್ಮ ಸೈನಿಕರಿಗೆ ಪುಷ್ಪ ನಮನ ಸಲ್ಲಿಸಿದರು. ಸೈನಿಕ ಅಂತೋನಿ ರಾಜ್ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ನಾಪೋಕ್ಲು: ದೇಶ ಸೇವೆ ಈಶ ಸೇವೆ ಇದು ಕೆಲವು ಪುಣ್ಯವಂತರಿಗೆ ಮಾತ್ರ ಪ್ರಾಪ್ತಿ ಆಗುತ್ತೆ, ದೇಶ ರಕ್ಷಣೆ ಎಂಬುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಇಲ್ಲಿನ ಲಯನ್ಸ್ ಕ್ಲಬ್ ಅಧ್ಯಕ್ಷ ಕುಂಡ್ಯೋಳAಡ ಗಣೇಶ್ ಮುತ್ತಪ್ಪ ಹೇಳಿದರು. ಸ್ಥಳೀಯ ಮಹಿಳಾ ಸಮಾಜದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಗಿಲ್ ಮತ್ತು ಸಿಯಾಚಿನ್ ಪ್ರದೇಶದ ಅತ್ಯಂತ ಶೀತ ವಾತಾವರಣ ಹೊಂದಿದ್ದು ವಾಸಿಸಲು ಯೋಗ್ಯವಿಲ್ಲದ ಪ್ರದೇಶದಲ್ಲಿ ದೇಶದ ಸೈನಿಕರು ಕೆಚ್ಚೆದೆಯ ಹೋರಾಟವನ್ನು ಮೆರೆದಿದ್ದಾರೆ ಎಂದು ಗಣೇಶ್ ದಿನದ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನು ಅಪ್ಪಿದ ಲ್ಯಾನ್ಸ್ ನಾಯಕ್ ಕಾರುಗುಂದದ ಅಜ್ಜಟ್ಟಿರ ಬಿದ್ದಪ್ಪ ಅವರ ಸ್ಮರಣಾರ್ಥ ಅವರ ಧರ್ಮಪತ್ನಿ ರೀನಾ ಬಿದ್ದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ರೀನಾ ಅವರು ಮಾತನಾಡಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಮುಕ್ಕಾಟಿರ ವಿನಯ್, ಕೇಟೋಳಿರ ರತ್ನ ಚರ್ಮಣ, ರಮೇಶ್ ಮುದ್ದಯ್ಯ, ಬಿದ್ದಾತಂಡ ಮೇರಿ ಚಿಟ್ಟಿಯಪ್ಪ ಅವರುಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾಂಡAಡ ರೇಖಾ ಪೊನ್ನಣ್ಣ ಪ್ರಾರ್ಥಿಸಿ, ಕಾರ್ಯಕ್ರಮವನ್ನು ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಚೌರಿರ ಉದಯ್, ಲಯನ್ಸ್ ಕ್ಲಬ್‌ನ ಖಜಾಂಜಿ ಮಾದೆಯಂಡ ಕುಟ್ಟಪ್ಪ ಹಾಗೂ ಹಿರಿಯ ಕಿರಿಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನು ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವೀರಾಜಪೇಟೆ: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಯಿತು. ಅರ್ಥಶಾಸ್ತç ಉಪನ್ಯಾಸಕರಾದ ಕಿಗ್ಗಾಲು ಹರೀಶ್ ಕಾರ್ಗಿಲ್ ವಿಜಯ್ ದಿವಸದ ಮಹತ್ವದ ಬಗ್ಗೆ ಮಾತನಾಡಿ, ಕಾರ್ಗಿಲ್ ಯುದ್ಧ ೮೩ ದಿನಗಳ ಕಾಲ ನಡೆಯಿತು.

ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಈ ಯುದ್ಧದಲ್ಲಿ ನೂರಾರು ಭಾರತೀಯ ಯೋಧರು ಹುತಾತ್ಮರಾದರು. ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ ೨೬ ಕೂಡ ಒಂದಾಗಿದ್ದು, ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.

ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಶ್ರೀರಕ್ಷಾ ಹೇ ಮೇರೆ ವತನ್ ಕೀ ಲೋಗೋ ಎಂಬ ದೇಶಭಕ್ತಿ ಸಾರುವ ಗೀತೆಯನ್ನು ಹಾಡಿದರು. ಇದೇ ಸಂದರ್ಭ ಸೈನಿಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ, ಉಪನ್ಯಾಸ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಗೋಣಿಕೊಪ್ಪ ವರದಿ: ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಒಬಿಸಿ ಘಟಕದ ವತಿಯಿಂದ ಪಟ್ಟಣದಲ್ಲಿರುವ ಹಿಂದು ಧ್ವÀ್ವಜಸ್ತಂಭದಲ್ಲಿ ವಿಜಯೋತ್ಸವ ಆಚರಿಸಲಾಯಿತು. ದೇಶಕ್ಕಾಗಿ ಮಡಿದ ಯೋಧರಿಗೆ ಪುಷ್ಪ ನಮನ ಸಲ್ಲಿಸಿ, ಆತ್ಮಕ್ಕೆ ಶಾಂತಿ ಕೋರಲಾಯಿತು. ಪ್ರಮುಖರಾದ ಸುಬ್ರಮಣಿ, ಸುರೇಶ್‌ರೈ, ಪುಷ್ಪ ಮನೋಜ್, ಮಂಜು, ಸೌಮ್ಯ ಬಾಲು ಇತರರು ಇದ್ದರು.