ಮಡಿಕೇರಿ, ಜು. ೨೭: ಬಾಂಗ್ಲಾದೇಶದ ಅಕ್ರಮ ವಲಸಿಗರ ಮೇಲೆ ನಿಗಾ ವಹಿಸುವ ಸಂಬAಧ ಜಿಲ್ಲೆಯ ಬೆಳೆಗಾರರ ಒಕ್ಕೂಟ, ಹೊಟೇಲ್, ಬಾರ್, ರೆಸಾರ್ಟ್, ಹೋಂಸ್ಟೇ, ಕಟ್ಟಡ ನಿರ್ಮಾಣ ಕಾರ್ಮಿಕರು, ಗುತ್ತಿಗೆದಾರರು, ವಾಣಿಜ್ಯೋದ್ಯಮಿಗಳ ಸಂಘ, ಕಾರ್ಮಿಕ ಇಲಾಖೆ, ಸಾರಿಗೆ ನಿಗಮ, ಐ.ಬಿ, ಗುಪ್ತವಾರ್ತೆ, ಡಿ.ಎಸ್.ಬಿ, ಅಧಿಕಾರಿಗಳೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರು ಸಭೆ ನಡೆಸಿ ಚರ್ಚಿಸಿದರು.