ವೀರಾಜಪೇಟೆ, ಜು. ೨೬: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಚುರಿಯಾಲ್ ಗ್ರಾಮದ ನಿವಾಸಿ ಡಿ. ಗಣೇಶ್ (೫೪) ನೇಣಿಗೆ ಶರಣಾದ ವ್ಯಕ್ತಿ.
ಮೃತರು ಕೂಲಿ ಕಾರ್ಮಿಕರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಗಣೇಶ್ ಕೆಲವು ತಿಂಗಳುಗಳಿAದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮನೆ ಮುಂದೆ ಅನತಿ ದೂರದಲ್ಲಿರುವ ಮಂದ್ನ ಸಮೀಪ ಮರವೊಂದಕ್ಕೆ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.