ಸದನದಲ್ಲಿ ದುರ್ನಡತೆ: ರಾಜ್ಯಸಭೆ ಕಲಾಪದಿಂದ ವಿಪಕ್ಷಗಳ ಸದಸ್ಯರ ಅಮಾನತು!

ನವದೆಹಲಿ, ಜು. ೨೬: ಅಮಾನತುಗೊಂಡ ವಿಪಕ್ಷ ಸಂಸದರು ಸದನವನ್ನು ನಡೆಯಲು ಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು. ಆದರೆ ಪದೇ ಪದೇ ಸದನದಲ್ಲಿ ಗದ್ದಲ, ಕೋಲಾಹಲವೆಬ್ಬಿಸಿದ್ದರಿಂದ ರಾಜ್ಯಸಭೆ ಸದನವನ್ನು ತಾ. ೨೭ಕ್ಕೆ ಮುಂದೂಡಲಾಗಿದೆ. ೧೯ ರಾಜ್ಯಸಭಾ ಸಂಸದರ ವಿರುದ್ಧದ ಕ್ರಮವು ಆಡಳಿತ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ಪ್ರಶ್ನಿಸುವ ದನಿಗಳನ್ನು ಮುಚ್ಚುವ ಪ್ರಯತ್ನ ಎಂದು ವಿಪಕ್ಷಗಳು ಹೇಳುತ್ತಿದ್ದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕೋಪ ಇದರಿಂದ ಹೆಚ್ಚಾಗಿದೆ. ಈ ಸರ್ಕಾರವು ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದೆ ಎಂದು ತೃಣಮೂಲ ನಾಯಕ ಡೆರೆಕ್ ಒ'ಬ್ರಿಯಾನ್ ಇಂದು ಸುದ್ದಿಗಾರರಿಗೆ ತಿಳಿಸಿದರು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಂಸದರು ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ ಮತ್ತು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಒತ್ತಾಯಿಸುತ್ತಿದ್ದಾರೆ, ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ನಿಯಮ ೨೬೭ (ರಾಜ್ಯಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು) ಅಡಿಯಲ್ಲಿ ಚರ್ಚೆಗಳನ್ನು ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. 'ನೀವು ನಮ್ಮನ್ನು ಅಮಾನತುಗೊಳಿಸಬಹುದು ಆದರೆ ನೀವು ನಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ. ಇದು. ಶೋಚನೀಯ ಪರಿಸ್ಥಿತಿ. ನಮ್ಮ ಗೌರವಾನ್ವಿತ ಸಂಸದರು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಅವರನ್ನು ಅಮಾನತುಗೊಳಿಸಲಾಗುತ್ತಿದೆ. ಇದು ಎಲ್ಲಿಯವರೆಗೆ ಮುಂದುವರಿಯುತ್ತದೆ? ಸಂಸತ್ತಿನ ಪಾವಿತ್ರ‍್ಯವು ಹೆಚ್ಚು ರಾಜಿಯಾಗಿದೆ' ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ. ಸ್ಪೀಕರ್ ಓಂ ಬಿರ್ಲಾ ಸುಶ್ಮಿತಾ ದೇವ್, ತೃಣಮೂಲ ಕಾಂಗ್ರೆಸ್, ಮೌಸಮ್ ನೂರ್, ತೃಣಮೂಲ ಕಾಂಗ್ರೆಸ್, ಶಾಂತಾ ಛೆಟ್ರಿ, ತೃಣಮೂಲ ಕಾಂಗ್ರೆಸ್, ಡೋಲಾ ಸೇನ್, ತೃಣಮೂಲ ಕಾಂಗ್ರೆಸ್, ಸಂತಾನು ಸೇನ್, ತೃಣಮೂಲ ಕಾಂಗ್ರೆಸ್, ಅಭಿರಂಜನ್ ಬಿಸ್ವರ್, ತೃಣಮೂಲ ಕಾಂಗ್ರೆಸ್, ಎಂಡಿ ನಾದಿಮುಲ್ ಹಕ್, ತೃಣಮೂಲ ಕಾಂಗ್ರೆಸ್, ಎಂ. ಹಮಮದ್ ಅಬ್ದುಲ್ಲಾ, ಡಿಎಂಕೆ, ಬಿ. ಲಿಂಗಯ್ಯ ಯಾದವ್, ತೆಲಂಗಾಣ ರಾಷ್ಟç ಸಮಿತಿ (ಟಿ.ಆರ್.ಎಸ್.), ಎ.ಎ. ರಹೀಮ್, ಸಿಪಿಐ(ಎಂ), ರವಿಹಂದರ ವಡ್ಡಿರಾಜು, ಟಿ.ಆರ್.ಎಸ್., ಎಸ್. ಕಲ್ಯಾಣಸುಂದರA, ಡಿಎಂಕೆ., ಆರ್. ಗಿರಂಜನ್, ಡಿಎಂಕೆ, ಎನ್.ಆರ್. ಎಲಾಂಗೋ, ಡಿಎಂಕೆ., ವಿ. ಶಿವದಾಸನ್, ಸಿಪಿಐ(ಎಂ)., ಎಂ. ಷಣ್ಮುಗಂ, ಡಿಎಂಕೆ., ದಾಮೋದರ ರಾವ್ ದಿವಕೊಂಡ, ಟಿಆರ್‌ಎಸ್, ಸಂತೋಷ್ ಕುಮಾರ್ ಪಿ, ಸಿಪಿಐ, ಕನಿಮೊಳಿ ಎನ್ವಿಎನ್ ಸೋಮು, ಡಿಎಂಕೆ. ಇವರುಗಳನ್ನು ಅಮಾನತ್ತುಗೊಳಿಸಿದ್ದಾರೆ.

ಮಗಳು, ಅಳಿಯನನ್ನು ಕಡಿದು ಕೊಂದು ಪೊಲೀಸರಿಗೆ ಶರಣಾದ ತಂದೆ!

ಚೆನ್ನೆöÊ, ಜು. ೨೬: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆ ಯಾಗಿದ್ದಕ್ಕೆ ನವವಿವಾಹಿತ ದಂಪತಿಯನ್ನು ಯುವತಿಯ ತಂದೆ ಕಡಿದು ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತೂತುಕುಡಿ ಜಿಲ್ಲೆಯ ಬಂದರು ನಗರವಾದ ಟುಟಿಕೋರಿನ್‌ನಲ್ಲಿ ಘಟನೆ ನಡೆದಿದೆ. ಯುವತಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ನಂತರ ಮಧುರೈನಲ್ಲಿ ಪೊಲೀಸರ ಮುಂದೆ ಹಾಜರಾದ ನವಜೋಡಿ ನಾವಿಬ್ಬರೂ ವಯಸ್ಕರು, ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆಂದು ಪೊಲೀಸರ ಮುಂದೆ ಹೇಳಿದರು. ಇಷ್ಟೇ ಅಲ್ಲದೇ ಯುವತಿ ತನ್ನ ಪೋಷಕರೊಂದಿಗೆ ವೀಡಿಯೋ ಕಾಲ್‌ನಲ್ಲಿ ಪೊಲೀಸ್ ಸ್ಟೇಷನ್‌ನಿಂದಲೇ ಮಾತನಾಡಿದರು. ನವದಂಪತಿ ಎಂದಿಗೂ ಪೊಲೀಸ್ ರಕ್ಷಣೆಯನ್ನು ಕೋರಲಿಲ್ಲ ಎಂದು ಟುಟಿಕೋರಿನ್‌ನ ಹಿರಿಯ ಪೊಲೀಸ್ ಬಾಲಾಜಿ ಸರವಣನ್ ತಿಳಿಸಿದ್ದಾರೆ. ಗ್ರಾಮದ ಹಿರಿಯರೂ ಮಧ್ಯಪ್ರವೇಶಿಸಿ ಹೊಸ ಜೋಡಿಗೆ ತೊಂದರೆ ಕೊಡದಂತೆ ಯುವತಿ ಕುಟುಂಬಕ್ಕೆ ಮನವಿ ಮಾಡಿದ್ದರು. ಈ ನಡುವೆ ದಂಪತಿಯನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹತ್ಯೆ ಬಳಿಕ ಯುವತಿಯ ತಂದೆ ಪೊಲೀಸರ ಮುಂದೆ ಶರಣಾಗಿದ್ದಾರೆ.

ಕಲುಷಿತ ನೀರು ಕುಡಿದ ನಂತರ ಬಾಲಕಿ ಸಾವು, ೨೦ ಮಂದಿ ಅಸ್ವಸ್ಥ

ಬಳ್ಳಾರಿ, ಜು. ೨೬: ಜಿಲ್ಲೆಯ ಕಂಪ್ಲಿ ತಾಲೂಕಿನ ಗೊನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ನಂತರ ೧೧ ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ೨೦ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ, ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಕುಲಷಿತ ನೀರು ಕುಡಿದ ನಂತರ ಕೆಲವು ಜನರು ಬೇಧಿ, ವಾಂತಿ ಮತ್ತಿತರ ಲಕ್ಷಣಗಳ ಬಗ್ಗೆ ದೂರು ನೀಡಿದ ಬಳಿಕ ಎರಡು ದಿನಗಳ ನಂತರ ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಕಂಪ್ಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸುಕನ್ಯಾ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾಳೆ. ಆರೋಗ್ಯಾಧಿಕಾರಿಗಳು ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ನರಿಹಾಲ ಹೊಳೆ ನೀರು, ಆಹಾರದ ನೀರಿನೊಂದಿಗೆ ಬೆರೆತು ನೀರು ಕಲುಷಿತವಾಗಿರುವುದಾಗಿ ಗೋನಾಳ್ ಗ್ರಾಮಸ್ಥರು ಆರೋಪಿಸಿದ್ದಾರೆ. ನೀರು ಕಲುಷಿತವಾಗಿರುವಂತೆ ಕಾಣುತ್ತಿದೆ. ಆದರೆ, ಪ್ರಯೋಗಾಲಯದ ಫಲಿತಾಂಶ ಬಂದ ಬಳಿಕವೇ ಅದು ದೃಢವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಎಲ್. ಜನಾರ್ಧನಾ ಹೇಳಿದ್ದಾರೆ.

ವಿರೋಧ ಪಕ್ಷಗಳಿಂದ ರಾಷ್ಟçಪತಿ ದ್ರೌಪದಿ ಮುರ್ಮುಗೆ ಪತ್ರ

ನವದೆಹಲಿ, ಜು. ೨೬: ವಿರೋಧ ಪಕ್ಷಗಳು ಮತ್ತು ನಾಯಕರನ್ನು ಗುರಿಯಾಗಿಸಿಕೊಳ್ಳಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ಹಲವು ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಮುಂಗಾರು ಅಧಿವೇಶನದ ಕಲಾಪಗಳ ಮೇಲೆ ಪರಿಣಾಮ ಬೀರಿರುವ ದೇಶದಲ್ಲಿನ ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೆಚ್ಚಳದ ಕುರಿತು ತುರ್ತು ಚರ್ಚೆಗೆ ಅವಕಾಶ ನೀಡದ ಸರ್ಕಾರದ ಹಠಮಾರಿ ಧೋರಣೆಯ ಬಗ್ಗೆಯೂ ವಿರೋಧ ಪಕ್ಷಗಳ ನಾಯಕರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಅವರ ವಿರುದ್ಧ ವ್ಯವಸ್ಥಿತ ಸೇಡಿನ ಅಭಿಯಾನದ ಭಾಗವಾಗಿ ತನಿಖಾ ಸಂಸ್ಥೆಗಳನ್ನು ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದನ್ನು ನಿಮ್ಮ ಗಮನಕ್ಕೆ ತರಲು ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ ಎಂದು ಕಾಂಗ್ರೆಸ್, ಎಎಪಿ, ಆರ್‌ಜೆಡಿ ಮತ್ತು ಸಿಪಿಐ-ಎಂ ಸೇರಿದಂತೆ ಹಲವು ಪಕ್ಷಗಳ ನಾಯಕರು ಸಹಿ ಹಾಕಿರುವ ಪತ್ರದಲ್ಲಿ ದೂರಲಾಗಿದೆ. ಹೀಗಾಗಿ, ಕೂಡಲೇ ನೀವು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ.

೬ ಗಂಟೆಗಳ ಕಾಲ ಸೋನಿಯಾ ಗಾಂಧಿ ವಿಚಾರಣೆ

ನವದೆಹಲಿ, ಜು. ೨೬: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬAಧಿಸಿದ ಮನಿ ಲಾಂಡರಿAಗ್ ಪ್ರಕರಣ ಸಂಬAಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಸುಮಾರು ೬ ಗಂಟೆಗಳ ಕಾಲ ವಿಚಾರಣೆ ಒಳಪಡಿಸಿದ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜುಲೈ ೨೧ ರಂದು ಇಡಿ ಎರಡು ಗಂಟೆಗಳ ಕಾಲ ಸೋನಿಯಾ ಅವರನ್ನು ಪ್ರಶ್ನಿಸಿತ್ತು. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಅವರ ಕೋರಿಕೆಯ ಮೇರೆಗೆ ದಿನದ ವಿಚಾರಣೆಯನ್ನು ಕೊನೆಗೊಳಿಸಿತ್ತು. ಇಂದು ಮತ್ತೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾದ ಸೋನಿಯಾ ಗಾಂಧಿ ಅವರನ್ನು ೬ ಗಂಟೆಗಳ ಕಾಲ ವಿಚಾರಣೆ ನಡೆಸಿ, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.