ಗೋಣಿಕೊಪ್ಪಲು, ಜು. ೨೬: ಗಡಿಭಾಗವಾದ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಕೊರಿಯಮಲೆ ಬೆಟ್ಟಕ್ಕೆ ಹೊಂದಿಕೊAಡಿರುವ ರೈತರೊಬ್ಬರ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ತೋಟದಲ್ಲಿ ಇರುವ ಅಡಿಕೆ ಮರವನ್ನು ಕಾಡಾನೆ ಎಳೆದು ತಿನ್ನುವ ವೇಳೆ ಮರದ ಸಮೀಪ ಹಾದು ಹೋಗಿದ್ದ ವಿದ್ಯುತ್ ತಂತಿ ಮರದೊಂದಿಗೆ ಎಳೆದು ಬಂದ ಹಿನ್ನೆಲೆಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಕಾಡಾನೆ ಮೃತಪಟ್ಟಿದೆ ಎನ್ನಲಾಗಿದೆ.

ಶ್ರೀಮಂಗಲ ವ್ಯಾಪ್ತಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. - ಹೆಚ್.ಕೆ. ಜಗದೀಶ್