ಮಡಿಕೇರಿ, ಜು. ೨೬: ಕರ್ನಾಟಕ ಸ್ಟೇಟ್ ಟೈರ್ಸ್ ಅಸೋಸಿಯೇಷನ್ನ ಜಿಲ್ಲಾ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಇಂದು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಮೆರವಣಿಗೆ ಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಟೈರ್ಸ್ ಅಸೋಸಿಯೇಷನ್ನ ಪದಾಧಿಕಾರಿಗಳು, ಸದಸ್ಯರು ಧರಣಿ ನಡೆಸಿ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು. ಚೌಕಿಯಿಂದ ಮುಖ್ಯ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಲಾಯಿತು.
ಸ್ತಿçà ಮತ್ತು ಪುರುಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆ ಒದಗಿಸಲು ಭವಿಷ್ಯನಿಧಿ ಒದಗಿಸಬೇಕು. ಕ್ಷೇಮ ನಿಧಿ ಮಂಡಳಿ ರಚಿಸುವುದು, ೬೦ ವರ್ಷ ತುಂಬಿದ ಟೈಲರ್ಗಳಿಗೆ ಮಾಸಿಕ ಪಿಂಚಣಿ ಜಾರಿ ಮಾಡಬೇಕು, ಮಹಿಳೆಯರಿಗೆ ಹೆರಿಗೆ ಭತ್ಯೆ ಮತ್ತು ವಿವಾಹ ಧನ ನೀಡುವುದು, ಅಗತ್ಯತೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ವಿದ್ಯಾರ್ಥಿ ವೇತನ ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ನಂದೀಶ್, ಉಪಾಧ್ಯಕ್ಷರಾದ ಬದ್ರುನ್ನಿಸಾ, ಕಾರ್ಯದರ್ಶಿ ಶಫಿ, ಮಾಜಿ ಅಧ್ಯಕ್ಷರುಗಳಾದ ಶೇಖ್ ಅಹಮದ್, ಮಂಜುನಾಥ್, ಮಾಜಿ ರಾಜ್ಯ
(ಮೊದಲ ಪುಟದಿಂದ) ಸಹಕಾರ್ಯದರ್ಶಿ ಅಶ್ರಫುನ್ನಿಸಾ, ಹಾಲಿ ರಾಜ್ಯ ಸಮಿತಿ ಕಾರ್ಯದರ್ಶಿ ಸುಧಾಕರ್, ಸಹಕಾರ್ಯದರ್ಶಿ ವಿಜು, ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ್, ವಸಂತ್ ಕುಲಾಲ್ ಸೇರಿದಂತೆ ವಿವಿಧ ಕ್ಷೇತ್ರ ಸಮಿತಿ ಹಾಗೂ ವಲಯ ಸಮಿತಿ ಪದಾಧಿಕಾರಿಗಳು, ವೃತ್ತಿ ಬಾಂಧವರು ಪಾಲ್ಗೊಂಡಿದ್ದರು. ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರ ಮೂಲಕ ಸರಕಾರಕ್ಕೆ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.