ಮಡಿಕೇರಿ, ಜು. ೨೬: ಜೀವವೈವಿಧ್ಯ ಮಂಡಳಿ ಎಂಬುದು ಜವಾಬ್ದಾರಿಯುತವಾದ ವಿಚಾರವಾಗಿದೆ. ಇದು ಮುಂದಿನ ಪೀಳಿಗೆಗೂ ಅಗತ್ಯವಾಗಿದ್ದು, ಸೂಕ್ಷಾö್ಮಣು ಜೀವಿಗಳು, ಪ್ರಕೃತಿಯ ಸಮತೋಲನ ಇದರಲ್ಲಿ ಬರುತ್ತದೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾದ ಚಿಂತನೆಯೊAದಿಗೆ ಮನುಕುಲಕ್ಕೂ ಹೊಂದಾಣಿಕೆಯಾಗುವ ರೀತಿಯಲ್ಲಿ ಕೆಲಸ ನಿಭಾಯಿಸಲು ಪ್ರಯತ್ನಿಸುವುದಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಾಪಂಡ ರವಿ ಕಾಳಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವೂ ಓರ್ವ ವಿಜ್ಞಾನ ಪದವೀಧರರಾಗಿದ್ದು, ತಮ್ಮಲ್ಲೂ ಕೆಲವು ಚಿಂತನೆಗಳಿವೆ. ಇದರೊಂದಿಗೆ ಮಂಡಳಿಗೆ ಸಂಬAಧಿಸಿದAತೆ ಇರುವ ಕಾರ್ಯಕ್ಷೇತ್ರ, ಜವಾಬ್ದಾರಿಗಳನ್ನು ಅರಿತುಕೊಂಡು ಕೆಲಸ ನಿರ್ವಹಿಸುವ ಉದ್ದೇಶ ತಮ್ಮದಾಗಿದೆ ಎಂದರು.
ಹಲವಾರು ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಮಕ್ಕಂದೂರು ಗ್ರಾಮದವರಾದ ಇವರು, ಕಾಲೇಜು ನಾಯಕ, ಎಬಿವಿಪಿ ಜಿಲ್ಲಾ ಪ್ರಮುಖ, ಬಿಜೆಪಿ ಯುವ ಮೋರ್ಚಾ, ತಾ.ಪಂ. ಅಧ್ಯಕ್ಷ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ತಾಲೂಕು ಯುವ ಒಕ್ಕೂಟದ ಸ್ಥಾಪಕ ಉಪಾಧ್ಯಕ್ಷ, ಮಕ್ಕಂದೂರು ವಿಎಸ್‌ಎಸ್‌ಎನ್ ಅಧ್ಯಕ್ಷ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ, ಭಾರತ ಸೇವಾದಳದ ಖಜಾಂಚಿ ಸೇರಿದಂತೆ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಐದು ಬಾರಿ ಕೆಲಸ ನಿರ್ವಹಿಸಿದ್ದಾರೆ. ಇದೀಗ ರವಿ ಕಾಳಪ್ಪ ಅವರಿಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಸ್ಥಾನದಂತಹ ಮತ್ತೊಂದು ಜವಾಬ್ದಾರಿ ಲಭ್ಯವಾಗಿದೆ.
ಮಕ್ಕಂದೂರಿನ ನಾಪಂಡ ದಿವಂಗತ ಮಂದಣ್ಣ ಹಾಗೂ ಪಾರ್ವತಿ ದಂಪತಿಯ ಪುತ್ರರಾದ ರವಿ ಕಾಳಪ್ಪ ಅವರ ಪತ್ನಿ ಅರ್ಚನಾ. ಪುತ್ರಿಯರಾದ ಪ್ರತೀಕ್ಷಾ ದಂತ ವೈದ್ಯ ವ್ಯಾಸಂಗ ಮಾಡುತ್ತಿದ್ದರೆ, ಮತ್ತೋರ್ವ ಪುತ್ರಿ ಪ್ರಣಮ್ಯ ಕೂಡ ಬಯೋಟೆಕ್ನಾಲಜಿ (ಜೈವಿಕ ತಂತ್ರಜ್ಞಾನ) ವ್ಯಾಸಂಗ ಮಾಡುತ್ತಿರುವುದು ವಿಶೇಷವಾಗಿದೆ.