ವೀರಾಜಪೇಟೆ, ಜು. ೨೬: ಥೈಲಾಂಡ್ನಲ್ಲಿ ನಡೆದ ಅಂರ್ರಾಷ್ಟಿçÃಯ ಕಾರ್ ರ್ಯಾಲಿಯಲ್ಲಿ ಕೊಡಗಿನ ವೀರಾಜಪೇಟೆಯ ಸುಹಾನ್ ಕಬೀರ್ ಭಾರತ ದೇಶವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಗಳಿಸುವುದರ ಮೂಲಕ ರಾಷ್ಟç ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜುಲೈ ೨೩ ಮತ್ತು ೨೪ ರಂದು ಥೈಲ್ಯಾಂಡ್ನ ಕಾಂಚನ್ ಬುರಿ ಎಂಬಲ್ಲಿ ೭೦ ಕೀ ಮೀ ಅಂತರದ ಅಂರ್ರಾಷ್ಟಿçÃಯ ದರ್ಟ್ ರ್ಯಾಲಿ ರೇಸಿಂಗ್ನ್ನು ಆಯೋಜಿಸಲಾಗಿತ್ತು. ಸುಮಾರು ೧೦೦ಕ್ಕೂ ಅಧಿಕ ರ್ಯಾಲಿ ಪಟುಗಳು ಭಾಗವಹಿಸಿದ್ದರು. ಚಂಡೀಗಡದ ಸನಮ್ ಪ್ರೀತ್ ಕಾರು ಚಾಲನೆ ಮಾಡಿದರೆ ಕೋ ಡ್ರೆöÊವರ್ ಆಗಿ ವೀರಾಜಪೇಟೆಯ ಸುಹಾನ್ ಕಬೀರ್ ಕಾರ್ಯನಿರ್ವಹಿಸಿದ್ದಾರೆ.
೨೦೧೮ರಲ್ಲಿ ಮೊದಲ ಬಾರಿ ರ್ಯಾಲಿ ಪದಾರ್ಪಣೆ ಮಾಡಿದ ಇವರು ಹಂಪಿಯಲ್ಲಿ ನಡೆದ ರಾಷ್ಟಿçÃಯ ರ್ಯಾಲಿ ರೇಸಿಂಗ್ನಲ್ಲಿ ಎರಡನೇ ಸ್ಥಾನ, ಅರುಣಾಚಲ ಪ್ರದೇಶದಲ್ಲಿ ಎರಡನೇ ಸ್ಥಾನ ಪಡೆದುಕೊಂಡರೆ ಕೊಯುತ್ತೂರಿನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಈ ಮೂರು ರ್ಯಾಲಿಗಳಿಗೆ ಗೋವಾದ ವೈಬವ್ ಕಾರು ಚಾಲಿಸಿದರು. ೨೦೨೧ ರಲ್ಲಿ ಬೆಂಗಳೂರಿನಲ್ಲಿ ನಡೆದ ರ್ಯಾಲಿಯಲ್ಲಿ ಚಂಡೀಗಡದ ಸನಮ್ ಪ್ರೀತ್ ಡ್ರೆöÊವರ್ ಕಾರು ಚಾಲನೆ ಮಾಡುವುದರ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದರು.
ಈವರೆಗೆ ಒಟ್ಟು ೬ ರಾಷ್ಟಿçÃಯ ರ್ಯಾಲಿ ಹಾಗೂ ಒಂದು ಅಂರ್ರಾಷ್ಟಿçÃಯ ರ್ಯಾಲಿ ರೇಸಿಂಗ್ ಮಾಡಿದ್ದಾರೆ. ಒವರ್ ಆಲ್ ೨೦-೨೦ ರ್ಯಾಲಿಯಲ್ಲಿ ರಾಷ್ಟಿçÃಯ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ಮುಂದಿನ ಸೆಪ್ಟೆಂಬರ್ನಲ್ಲಿ ಥೈಲ್ಯಾಂಡ್ನಲ್ಲಿ ನಡೆಯುವ ಮತ್ತೊಂದು ಅಂರ್ರಾಷ್ಟಿçÃಯ ರ್ಯಾಲಿ, ಡಿಸೆಂಬರ್ನಲ್ಲಿ ಮಲೇಷಿಯಾದಲ್ಲಿ ನಡೆಯುವ ರ್ಯಾಲಿಗೆ ಸಜ್ಜಾಗುತ್ತಿದ್ದಾರೆ.
ಇವರ ಸಹೋದರ ಸುಹೇಮ್ ಕಬೀರ್ ಅವರು ಕೂಡ ರ್ಯಾಲಿ ಪಟುವಾಗಿದ್ದು ೨೦೧೨ ರಿಂದಲೆ ಅವರು ತಮ್ಮನ್ನು ಕಾರ್ ರ್ಯಾಲಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಕೂಡ ಹಲವಾರು ರಾಷ್ಟಿçÃಯ ರ್ಯಾಲಿಗಳಲ್ಲಿ ಭಾಗಿಯಾಗಿ ಪ್ರಶಸ್ತಿ ಮುಡಿಗೇರಿಸಿ ಕೊಂಡಿದ್ದಾರೆ. ತನ್ನ ಸಹೋದರನೆ ನನಗೆ ಸ್ಫೂರ್ತಿಯಾಗಿದ್ದು ನಾನು ಈ ಹಂತಕ್ಕೆ ತಲುಪಲು ಅವರು ಕಾರಣಕರ್ತರಾಗಿದ್ದಾರೆ ಎಂದು ತಮ್ಮ ಸಹೋದರನನ್ನು ಶ್ಲಾಘಿಸಿದರು.
ಪ್ರಸಕ್ತ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಹಾಗೂ ಕೆಲಸಕ್ಕೆ ಸಂಬAಧಿಸಿದ ಕೋಚಿಂಗ್ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಇವರು ವೀರಾಜಪೇಟೆ ಪಂಜರುಪೇಟೆಯ ಡಿವೈನ್ ಮೋಟರ್ಸ್ ಮಾಲೀಕ ಕಬೀರ್ ಹಾಗೂ ಜುಹೇರಾ ಕಬೀರ್ ಅವರ ಪುತ್ರರಾಗಿದ್ದಾರೆ.