ವೀರಾಜಪೇಟೆ, ಜು. ೨೬: ವೀರಾಜಪೇಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ರುದ್ರಗುಪ್ಪೆಯ ಕಂಡAಗಾಲ ಗ್ರಾಮದ ಕೂಡಾಣ ಮತ್ತು ಮಂದಮಾಡ ಐನ್‌ಮನೆಯ ರಸ್ತೆ ತೀವ್ರ ದುಸ್ಥಿತಿಯಲ್ಲಿದೆ.
ಪ್ರಸ್ತುತ ಗ್ರಾಮದಲ್ಲಿ ಸುಮಾರು ೭೦ ಕುಟುಂಬಗಳು ವಾಸ ಮಾಡುತ್ತಿವೆ. ಕಂಡAಗಾಲ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸುಮಾರು ಮೂರು ಕಿ.ಮೀ.ಗಳಾಗಿದೆ. ಸಂಪರ್ಕ ರಸ್ತೆಯು ಕಿರಿದಾಗಿದ್ದು ರಸ್ತೆಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊAಡು ರಸ್ತೆಯು ಜಲಾವೃತ್ತವಾಗಿರುವಂತೆ ಬಾಸವಾಗುತ್ತದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಸಾಹಸವಾಗಿದೆ. ಸ್ಥಳಕ್ಕೆ ಆಗಮಿಸುವ ಅಟೋ ರಿಕ್ಷಾಗಳು ದುಪ್ಪಟ್ಟು ದರವನ್ನು ವಿಧಿಸುತ್ತವೆ. ತುರ್ತು ಸಂದರ್ಭಗಳಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಸ್ತೆ ದುರಸ್ತಿಗಾಗಿ ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಶಾಸಕರು, ಸಂಸದರು ಹೀಗೆ ಹಲವು ಜನಪತ್ರಿನಿಧಿಗಳು ಸೇರಿದಂತೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ್ಲ. ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರೂ ಜನಪ್ರತಿನಿಧಿಗಳ ಮರಳು ಮಾತಿಗೆ ಬಲಿಯಾಗಿ ಭರವಸೆಯ ಮಾತಿಗೆ ಸರಿ ಎಂದು ಮತ ಹಾಕಿ ಸುಮ್ಮನಿದ್ದಾರೆ. ಇತ್ತೀಚೆಗೆ ರಸ್ತೆಯಲ್ಲಿ ಬಾಳೆ ಗಿಡವನ್ನು ನೆಟ್ಟು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕಂಡAಗಾಲ ಸಂಪರ್ಕ ರಸ್ತೆ ಸುಮಾರು ೨೦ ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಸಂಚಾರವು ದುಸ್ತರವಾಗಿದೆ. ರಸ್ತೆ ದುರಸ್ತಿಗಾಗಿ ಹೋರಾಟಗಳನ್ನು ಮಾಡಿದ್ದು ಮನವಿಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗದೆ ಇಂದಿಗೂ ಯತಾಸ್ಥಿತಿಯಲ್ಲಿದೆ. ೧೨-೧೦-೨೦೧೮ ರಲ್ಲಿ ರಸ್ತೆ ದುರಸ್ತಿಗಾಗಿ ಸಂಸದರಿಗೆ ಮನವಿ, ೧೫-೦೯-೨೦೨೧ ರಲ್ಲಿ ಗ್ರಾಮ ಪಂಚಾಯಿತಿಗೆ ಮನವಿ, ೦೮-೦೨-೨೦೨೨ ರಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ, ಕೊಡಗಿನ ಉಸ್ತುವಾರಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೂ ೨೩-೧೦-೨೦೨೧ ರಂದು ಮನವಿ ಸಲ್ಲಿಸಿರುತ್ತೇವೆ. ಸಚಿವರು ಅರ್ಜಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ವರ್ಷ ಕಳೆದರೂ ರಸ್ತೆಯ ಅಭಿವೃದ್ಧಿ ಶೂನ್ಯವಾಗಿದೆ. ಗುಂಡಿಮಯವಾದ ರಸ್ತೆಯನ್ನು ದಿನಗಳ ಹಿಂದೆ ಸುಮಾರು ರೂ. ೧೫ ಸಾವಿರ ವೆಚ್ಚದಲ್ಲಿ ಕಾಡು ಕಲ್ಲು, ಮಣ್ಣುಗಳಿಂದ ತುಂಬಿದ್ದೇವೆ. ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ನಿರ್ಲಕ್ಷö್ಯ ತೋರಿದ್ದಾರೆ ಎಂದು ಗ್ರಾಮಸ್ಥ ಬಲ್ಲಡಿಚಂಡ ಲೋಕನಾಥ್ ಆರೋಪಿಸಿದ್ದಾರೆ.
ಗ್ರಾಮದಲ್ಲಿ ವೃದ್ಧರು, ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ತುರ್ತು ಕೆಲಸಗಳಿಗೆ ಪಟ್ಟಣಕ್ಕೆ ತೆರಳುವುದು ಪ್ರಯಾಸದ ಕೆಲಸವಾಗಿದೆ. ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲಿಸುವುದು ಕಷ್ಟಕರವಾಗಿದೆ ಎಂದು ಗ್ರಾಮಸ್ಥೆ ಮೈಮೂನಾ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಬೇಸಿಗೆಯಲ್ಲಿ ಮನೆಗೆ ಹೊಂದಿಕೊAಡಿರುವ ಬಾವಿಗಳಲ್ಲಿ ನೀರಿನ ಕೊರತೆ ಕಾಣಿಸುತ್ತದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಸರ್ಕಾರ ಮತ್ತು ಜಿಲ್ಲಾಡಳಿತವು ಗ್ರಾಮದ ಏಳಿಗೆಗಾಗಿ ಕನಿಷ್ಟ ಮೂಲಭೂತ ಸೌಕರ್ಯವಾದ ಗ್ರಾಮದ ರಸ್ತೆ ದುರಸ್ತಿ, ಕುಡಿಯುವ ನೀರು ಮತ್ತು ಬೀದಿ ದೀಪ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮಂದಮಾಡ ಷಂಶುದ್ದೀನ್ ಆಗ್ರಹಿಸಿದ್ದಾರೆ.
ಕೊರೊನಾ ನಡುವೆ ಯಾವುದೇ ಅನುದಾನಗಳು ಗ್ರಾಮ ಪಂಚಾಯಿತಿಗೆ ಬಿಡುಗಡೆಗೊಂಡಿರುವುದಿಲ್ಲ. ಅನುದಾನಗಳು ಬಂದರೂ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಹಂಚಿಕೆಯಾಗಬೇಕು. ರಸ್ತೆ ದುರಸ್ತಿಗಾಗಿ ಸುಮಾರು ಮೂರು ವರ್ಷಗಳ ಹಿಂದೆ ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ಜೆಲ್ಲಿಕಲ್ಲು ಹಾಕಲಾಗಿದೆ. ಕಳೆದ ವರ್ಷ ಪ್ರಕೃತಿ ವಿಕೋಪದಡಿಯಲ್ಲಿ ವಿಶೇಷ ಅನುದಾನ ರೂ. ೧.೮೦ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ೧೦ ಲಕ್ಷ ರೂ.ಗಳ ಕ್ರೀಯಾ ಯೋಜನೆ ತಯಾರಿಸಲಾಗಿದೆ. ಶಾಸಕರು ಮತ್ತು ಎಂ.ಎಲ್.ಸಿ. ತಲಾ ಐದು ಲಕ್ಷ ರೂ.ಗಳ ಅನುದಾನಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದು, ಮಳೆಗಾಲ ಕಳೆದ ನಂತರದಲ್ಲಿ ರಸ್ತೆ ಕಾಮಗಾರಿಗಳು ಆರಂಭವಾಗಲಿವೆ ಎಂದು ಗ್ರಾ.ಪಂ. ಸದಸ್ಯ ಪ್ರಸನ್ನ ಸುಬ್ಬಯ್ಯ ತಿಳಿಸಿದ್ದಾರೆ.
- ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ