ಸುಂಟಿಕೊಪ್ಪ, ಜು. ೨೬: ಇಂಗ್ಲೆAಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ ೨೮ ರಿಂದ ಆಗಸ್ಟ್ ೮ ರವರೆಗೆ ನಡೆಯಲಿರುವ ೨೨ನೇ ಕಾಮನ್‌ವೆಲ್ತ್ ಗೇಮ್ಸ್ನ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೊಡಗಿನ ಹಾಕಿ ಪ್ರತಿಭೆ ಅಂಕಿತಾ ಸುರೇಶ್ ಅವರು ನಿಯುಕ್ತಿಗೊಂಡಿದ್ದಾರೆ. ಅಂಕಿತಾ ಸುರೇಶ್ ಅವರು ಸಹಾಯಕ ಕೋಚಿಂಗ್‌ನ ಹೊಣೆಯೊಂದಿಗೆ ತಂಡದ ಮ್ಯಾನೇಜರ್ ಆಗಿ ಕೂಡ ಕಾರ್ಯನಿರ್ವಹಿಸಲಿದ್ದಾರೆ. ೨೦೨೧ರಲ್ಲಿ ಜಪಾನಿನ ಟೋಕಿಯೋ ದಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಅಂಕಿತಾ ಸುರೇಶ್ ಅವರು ಮಹಿಳಾ ತಂಡದ ಸಹಾಯಕ ಕೋಚ್ ಆಗಿದ್ದಾಗ ತಂಡವು ಉತ್ತಮ ಸಾಧನೆ ಮಾಡುವುದರ ಮೂಲಕ ಭಾರತೀಯರ ಮನ ಗೆದ್ದಿತ್ತು. ಮೂಲತಃ ಮಡಿಕೇರಿಯವರಾಗಿರುವ ಅಂಕಿತಾ ಸುರೇಶ್ ಅವರು ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿ.

ಭಾರತ ಮಹಿಳಾ ಹಾಕಿ ತಂಡವು ಮೊದಲ ಪಂದ್ಯದಲ್ಲಿ ಘಾನ ದೇಶದ ತಂಡವನ್ನು ಎದುರಿಸಲಿದೆ.