ಹೆಬ್ಬಾಲೆ, ಜು.೨೫ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೆಬ್ಬಾಲೆ ಹೋಬಳಿ ಕಸಾಪ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೋಮವಾರ ನಡೆಯಿತು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹೋಬಳಿ ಕಸಾಪ ಘಟಕದ ನೂತನ ಅಧ್ಯಕ್ಷ ಎಂ.ಎನ್. ಮೂರ್ತಿ ಮತ್ತು ಗೌರವ ಕಾರ್ಯದರ್ಶಿಯಾಗಿ ಎಚ್.ಎನ್.ಸುಬ್ರಹ್ಮಣ್ಯ, ಕವಿತಾ ಪುಟ್ಟರಾಜು ಮತ್ತು ಕೋಶಾಧಿಕಾರಿಯಾಗಿ ಎಸ್.ಎಸ್.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳಿಗೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೆಬ್ಬಾಲೆ ಅತಿದೊಡ್ಡ ಗ್ರಾಮ ಹಾಗೂ ಹೆಚ್ಚಿನ ಶಿಕ್ಷಕರನ್ನು ಹೊಂದಿರುವ ಗ್ರಾಮ ಎಂಬ ಹೆಮ್ಮೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಕಸಾಪ ಚಟುವಟಿಕೆಗಳನ್ನು ಪಸರಿಸಬೇಕು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಗ್ರಾ.ಪಂ.ಮಟ್ಟದಲ್ಲೂ ಕಸಾಪ ಘಟಕಗಳು ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ. ಹುಟ್ಟುವಾಗಲೇ ಯಾರು ಸಾಹಿತಿಗಳಾಗಲಿ, ಬರಹಗಾರರಾಗಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಂಡು ವಿಶೇಷ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಕಾಲೇಜುಗಳಲ್ಲಿ ವಿದ್ಯಾರ್ಥಿ ಸಾಹಿತ್ಯ ಬಳಗÀ ಸ್ಥಾಪನೆಗೆ ಚಿಂತನೆ ಮಾಡಲಾಗಿದ್ದು,ಈ ಕುರಿತು ಡಿಡಿಪಿಐ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದರು. ಸಾಹಿತ್ಯ ಬಳಗದಲ್ಲಿ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ ಜಿಲ್ಲೆಯಲ್ಲಿ ೧೬ ನೂತನ ಹೋಬಳಿ ಘಟಕಗಳು ಆರಂಭಿಸಲಾಗುತ್ತಿದೆ. ಕಸಾಪದಲ್ಲಿ ಕೆಲಸ ಮಾಡುವುದು ಗೌರವ ಹಾಗೂ ಹೆಮ್ಮೆ ವಿಚಾರವಾಗಿದೆ. ಎಲ್ಲಾ ಕನ್ನಡ ಅಭಿಮಾನಿಗಳು ಕಸಾಪ ಸದಸ್ಯರಾಗಬಹುದು. ಕಸಾಪ ಅಧಿಕಾರ ವಿಕೇಂದ್ರೀಕರಣದ ನಿಯಮದಡಿ ಹೋಬಳಿ ಘಟಕಗಳನ್ನು ರಚನೆ ಮಾಡಲಾಗುತ್ತಿದೆ. ಕಸಾಪ ಗುರಿ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು,ನುಡಿ,ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಮೂಲಕ ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಾಗಿದೆ. ಸಾಹಿತ್ಯದ ಬಗ್ಗೆ ಒಲವು ಮೂಡಿಸುವಂತ ಕಾರ್ಯಕ್ರಮ ಆಯೋಜನೆ, ದತ್ತಿನಿಧಿ ಸ್ಥಾಪನೆಗೆ ಆದ್ಯತೆ ನೀಡಬೇಕು.ಇದರಿಂದ ಕಸಾಪ ಕಾರ್ಯಕ್ರಮ ನಡೆಸಲು ಸಹಕಾರವಾಗುತ್ತದೆ. ದತ್ತಿನಿಧಿ ೨೦೦ಕ್ಕೆ ಏರಿಸಲು ಕ್ರಮವಹಿಸಲು ಮನವಿ ಮಾಡಿದ ಕಾಮತ್ ಅವರು. ಕಸಾಪ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಲು ಪದಾಧಿಕಾರಿಗಳು ಶ್ರಮಿಸಬೇಕು ಎಂದು ಮನವಿ ಮಾಡಿದರು
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕಸಾಪ ಸದಸ್ಯ ಜಿ.ಎಲ್.ರಾಮಪ್ಪ ಮಾತನಾಡಿ, ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕು.ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಸಾಪ ಸದಸ್ಯತ್ವವನ್ನು ಹೊಂದುವ ಮೂಲಕ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.ಹೋಬಳಿ ನಿಕಟಪೂರ್ವ ಅಧ್ಯಕ್ಷ ಟಿ.ಕೆ.ಪಾಂಡುರAಗ ಅವರು ನೂತನ ಅಧ್ಯಕ್ಷ ಎಂ.ಎನ್.ಮೂರ್ತಿ ಅವರಿಗೆ ಕಸಾಪ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೆಬ್ಬಾಲೆ ಗ್ರಾಮದಲ್ಲಿ ನಡೆಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧ್ಯಕ್ಷ ಕೇಶವ ಕಾಮತ್ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್.ಮಂಜುನಾಥ್, ಉಪಾಧ್ಯಕ್ಷೆ ಅರುಣ್ ಕುಮಾರಿ, ಕಸಾಪ ಹಿರಿಯ ಸದಸ್ಯರಾದ ಹೆಬ್ಬಾಲೆಯ ಜಿ.ಎಲ್.ರಾಮಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ, ಶಾಲಾ ಆಡಳಿತ ಮಂಡಳಿ ಮಾಜಿ ನಿರ್ದೇಶಕರಾದ ಎಚ್.ಎಚ್.ರಾಜಶೇಖರ್, ಎಚ್.ಸಿ.ಹರೀಶ್, ಮುಖಂಡರಾದ ಟಿ.ಬಿ.ಜಗದೀಶ್, ಕಾಲೇಜಿನ ಪ್ರಾಂಶುಪಾಲ ಎನ್.ಎನ್.ಧರ್ಮಪ್ಪ,ಮುಖ್ಯ ಶಿಕ್ಷಕ ಬಸವರಾಜು ಶೆಟ್ಟಿ, ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜು, ರಾಜಣ್ಣ, ತಾಲೂಕು ಘಟಕದ ಕೋಶಾಧಿಕಾರಿ ಉಮೇಶ್, ಜಿಲ್ಲಾ ಕಸಾಪ ನಿರ್ದೇಶಕ ವೆಂಕಟನಾಯಕ್, ತಾಲೂಕು ನಿರ್ದೇಶಕ ಕಾಳಪ್ಪ, ನಿವೃತ್ತ ಶಿಕ್ಷಕಿ ಜಯಂತಿ ಹಾಗೂ ಗ್ರಾ.ಪಂ.ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ನಿರೂಪಿಸಿ, ಲೋಕೇಶ್ ಸ್ವಾಗತಿಸಿದರು. ಶಿಕ್ಷಕ ರಮೇಶ್ ವಂದಿಸಿದರು.ಇದೇ ಸಂದರ್ಭ ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಹೋಬಳಿ ನಿಕಟಪೂರ್ವ ಅಧ್ಯಕ್ಷ ಟಿ.ಕೆ.ಪಾಂಡುರAಗ, ಹಿರಿಯ ಕಸಾಪ ಸದಸ್ಯ ಜಿ.ಎಲ್.ರಾಮಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.