ಮಡಿಕೇರಿ, ಜು. ೨೫: ನಿನ್ನೆ ದಿನ ಅಕ್ರಮವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಸುಂಟಿಕೊಪ್ಪ ಪೊಲೀಸರು ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮೇಕೇರಿ ಗ್ರಾಮದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಸಾಗಾಣಿಕೆ ನಡೆಸಿರುವುದಾಗಿ ತಿಳಿದು ಬಂದ ಹಿನ್ನೆಲೆ ವಾಹನವನ್ನು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ.
ಅಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮೇಕೇರಿ ಗ್ರಾಮದ ಸರ್ವೆ ನಂ. ೪೭/೧ ರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನದಲ್ಲಿದ್ದ ಕಲ್ಲು ಫುಕ್ಸೈಟ್ ಕ್ವಾಟ್ಟೆöÊðಟ್ ಆಗಿದ್ದು, ಆ ಕಲ್ಲಿನಲ್ಲಿ ಅಲ್ಲಲ್ಲಿ ಕೊರಾಂಡA ಎಂಬ ಹರಳು ಕಲ್ಲುಗಳು ಇರುವುದು ಕಂಡು ಬಂದಿದೆ ಈ ಹಿನ್ನೆಲೆಯಲ್ಲಿ ಭೂವಿಜ್ಞಾನ ಇಲಾಖೆ ಕಾನೂನು ಕ್ರಮಕೈಗೊಂಡಿದೆ.