ಕರಿಕೆ, ಜು. ೨೫: ಕೇರಳಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ಎಂಟನೇ ಮೈಲು ಬಳಿ ರಸ್ತೆಯ ಇಳಿಜಾರು ತಿರುವಿನಲ್ಲಿ ಬೃಹತ್ ಹೊಂಡ ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಯ ನೀರಿನ ರಭಸಕ್ಕೆ ರಸ್ತೆಯ ಇಳಿಜಾರು ಪ್ರದೇಶದ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆಯ ಮಧ್ಯಭಾಗ ದೊಡ್ಡ ಗುಂಡಿಯಾದ ಪರಿಣಾಮ ರಸ್ತೆಯಲ್ಲಿರುವ ಕಲ್ಲುಗಳು ವಾಹನಗಳ ತಳಭಾಗಕ್ಕೆ ತಾಗುತ್ತಿರುವುದರಿಂದ ವಾಹನಗಳಿಗೆ ಹಾನಿಯಾಗುತ್ತಿವೆ. ಲೋಕೋಪಯೋಗಿ ಇಲಾಖೆ ಗುಂಡಿಮುಚ್ಚುವ ಕಾರ್ಯಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಇಲಾಖೆ ರಸ್ತೆ ದುರಸ್ತಿಗೆ ಕ್ರಮ ವಹಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸುಧೀರ್