ಶ್ರೀಮಂಗಲ, ಜು. ೨೫: ಶ್ರೀಮಂಗಲ ವಿದ್ಯುತ್ ಸರಬರಾಜು ಉಪ ಕೇಂದ್ರದ ವ್ಯಾಪ್ತಿಗೆ ಸರಬರಾಜಾಗುವ ವಿದ್ಯುತ್ ಮಾರ್ಗದಲ್ಲಿ ದಿನನಿತ್ಯ ಅಡಚಣೆಯಾಗುತ್ತಿದ್ದು, ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಹಾಗೂ ಲೈನ್ಮ್ಯಾನ್ಗಳಿಗೆ ಹಲವು ಸಮಯದಿಂದ ಸ್ಪಂದಿಸಲು ಕೇಳಿಕೊಂಡಿದ್ದರೂ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಆರೋಪಿಸಿ ವಿದ್ಯುತ್ ಉಪಕೇಂದ್ರದ ಎದುರು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಸಂಘಟನೆಯ ನೇತೃತ್ವದಲ್ಲಿ ಹಲವು ಸಂಘ ಸಂಸ್ಥೆಗಳು ಹಾಗೂ ಸಾರ್ವನಿಕರು ಪ್ರತಿಭಟನೆ ನಡೆಸಿದರು.ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು ಮಾತನಾಡಿ, ವಿದ್ಯುತ್ ಉಪ ಕೇಂದ್ರಕ್ಕೆ ತುರ್ತು ಸಂದರ್ಭ ಹಾಗೂ ವಿದ್ಯುತ್ ಅಡಚಣೆಯ ದೂರುಗಳ ಬಗ್ಗೆ ದೂರವಾಣಿಗೆ ಕರೆ ಮಾಡಿದರೆ ಇಲ್ಲಿನ ಕಿರಿಯ ಅಭಿಯಂತರ ಹಾಗೂ ಲೈನ್ಮ್ಯಾನ್ಗಳು ಕರೆ ಸ್ವೀಕರಿಸುವುದಿಲ್ಲ. ಕಚೇರಿಗೆ ಬಂದರೆ ಯಾವುದೇ ಒಬ್ಬ ಸಿಬ್ಬಂದಿಗಳು, ಅಧಿಕಾರಿಗಳು ಲಭ್ಯವಿರುವುದಿಲ್ಲ. ಎಲ್ಲಿ ಹೋಗಿದ್ದಾರೆ ಎಂದು ಕೇಳಿದರೂ ಉತ್ತರಿಸುವುದಿಲ್ಲ. ಶ್ರೀಮಂಗಲ ವಿದ್ಯುತ್ ಸರಬರಾಜು ಉಪ ಕೇಂದ್ರದಿAದ ಬಿರುನಾಣಿ, ಟಿ-ಶೆಟ್ಟಿಗೇರಿ, ನಾಲ್ಕೇರಿ, ಕುಟ್ಟ, ಬೀರುಗ, ಕುರ್ಚಿ, ಪರಕಟಗೇರಿವರೆಗೆ ಮಾರ್ಗಗಳಿವೆ. ಇವುಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಮತ್ತು ಸಿಬ್ಬಂದಿ ಮತ್ತು ಅಧಿಕಾರಿಗಳ ನಿ¯ðಕ್ಷö್ಯದಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಅವರು ಮಾತನಾಡಿ, ಅತ್ಯಂತ ವಿಶಾಲವಾದ ವ್ಯಾಪ್ತಿ ಹೊಂದಿರುವ ಶ್ರೀಮಂಗಲ ವಿದ್ಯುತ್ ಉಪಕೇಂದ್ರದ ವ್ಯಾಪ್ತಿ ಬಹಳ ವಿಸ್ತಾರವಾಗಿದ್ದು, ಹೆಚ್ಚಿನ ಮಳೆ ಹಾಗೂ ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿಗೆ ಖಾಯಂ ಕಿರಿಯ ಅಭಿಯಂತರರು ಕೇಂದ್ರದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕಾಗಿದೆ. ಸೆಸ್ಕ್ ಇಲಾಖೆ ಲೈನ್ಮ್ಯಾನ್ಗಳನ್ನು ಬಡ್ತಿ ನೀಡಿ ನಾಮಕಾವಸ್ಥೆಗೆ ಕಿರಿಯ ಅಭಿಯಂತರರನ್ನಾಗಿ ಆ ಸ್ಥಾನಕ್ಕೆ ಅರ್ಹತೆ
(ಮೊದಲ ಪುಟದಿಂದ) ಇಲ್ಲದವರನ್ನು ನಿಯೋಜಿಸುತ್ತಿದೆ. ಮಳೆಗಾಲಕ್ಕೆ ಮುನ್ನ ಮಾರ್ಗದ ಸಮೀಪ ಇರುವ ಮರ ಕೊಂಬೆಗಳನ್ನು ತೆರವು ಮಾಡಬೇಕಾಗಿದ್ದರೂ ಇಲಾಖೆಯಿಂದ ಈ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳು ಹಾಗೂ ಲೈನ್ಮ್ಯಾನ್ಗಳ ಬೇಜವಾಬ್ದಾರಿತನದಿಂದ ಈ ಭಾಗದ ಜನರು ವಿದ್ಯುತ್ ಕಡಿತ ಅನುಭವಿಸುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಉಸ್ತುವಾರಿ ಕಿರಿಯ ಅಭಿಯಂತರ ನದಾಫ್ ಅವರು ಆಗಮಿಸಿ ಇಲಾಖೆಯ ಹಿರಿಯ ಅಧಿಕಾರಿಗಳು ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಕ್ಷಣ ಶ್ರೀಮಂಗಲಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಲಾಖೆಯೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಈ ಸಮಸ್ಯೆಗಳು ಬಗೆಹರಿಯಬೇಕಾಗಿರುವುದರಿಂದ ಅವರ ಗಮನಕ್ಕೆ ಈ ವಿಷಯವನ್ನು ತರಲಾಗುವುದು ಎಂದು ಭರವಸೆ ನೀಡಿದರು.
ಆಗಸ್ಟ್ ೧ ರಂದು ಸಭೆ
ಆಗಸ್ಟ್ ೧ ರಂದು ಸೋಮವಾರ ಶ್ರೀಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪೂವಾಹ್ನ ೧೦-೩೦ ಗಂಟೆಗೆ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮತ್ತು ಕೊಡಗು ಬೆಳೆಗಾರರ ಒಕ್ಕೂಟದ ಶ್ರೀಮಂಗಲ ಹೋಬಳಿ ವಿಭಾಗದಿಂದ ಸೆಸ್ಕ್ ಇಲಾಖೆಯ ಎಸ್.ಇ., ಇ.ಇ. ಎ.ಇ.ಇ. ಮತ್ತು ಜೆ.ಇ. ಅವರೊಂದಿಗೆ ಸಾರ್ವಜನಿಕ ಸಂವಾದ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಣೀರ ಮುತ್ತಪ್ಪ ಅವರು ತಿಳಿಸಿದರು.
ಪ್ರತಿಭಟನೆ ವೇಳೆ ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಕುಟ್ಟ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ, ಟಿ-ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್, ರೈತ ಮುಖಂಡ ಪೆಮ್ಮಣಮಾಡ ರಮೇಶ್, ಪ್ರಮುಖ ಬೆಳೆಗಾರರಾದ ಸಿ.ಎ.ರಘು, ಅಯ್ಯಮಾಡ ತಿಮ್ಮಯ್ಯ, ಅಯ್ಯಮಾಡ ಸೋಮೇಶ್, ಚಂಗುಲAಡ ರಾಜಪ್ಪ, ಕಾಳಿಮಾಡ ದಿಲೀಪ್, ಬಾದುಮಂಡ ಪೂಣಚ್ಚ, ಬಾದುಮಂಡ ಪಮ್ಮಿ ರಮೇಶ್, ತಡಿಯಂಗಡ ಗಣೇಶ್, ಮಚ್ಚಮಾಡ ಕಾಶಿ, ತೀತೀರ ಕರುಂಬಯ್ಯ, ಮೀದೇರಿರ ವಿಜಯ್, ಅಜ್ಜಮಾಡ ಶಂಬು, ಕೋಟ್ರಮಾಡ ರೋಶನ್, ಮಾಣೀರ ದರ್ಶನ್, ಕೋಟ್ರಮಾಡ ನಿತಿನ್ ಮತ್ತಿತರರು ಭಾಗವಹಿಸಿದ್ದರು. ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.