ವೀರಾಜಪೇಟೆ, ಜು. ೨೫: ವೀರಾಜಪೇಟೆ ರೋಟರಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ರೋಟರಿಯ ಟ್ರೀ ಪ್ಲಾಂಟೇಶನ್ ಡಿಸ್ಟಿçಕ್ಟ್ ಚೇರ್‌ಮನ್ ಎಂ. ಈಶ್ವರಭಟ್, ಅಸಿಸ್ಟೆಂಟ್ ಗವರ್ನರ್ ರತನ್ ತಮ್ಮಯ್ಯ ಹಾಗೂ ಜೋನಲ್ ಲೆಫ್ಟಿನೆಂಟ್ ನವೀನ್ ಬೆಳ್ಳ್ಯಪ್ಪ ಅವರ ಉಪಸ್ಥಿತಿಯಲ್ಲಿ ವೀರಾಜಪೇಟೆ ರೋಟರಿ ಸಂಸ್ಥೆಯ ನೂತನ ಸಾಲಿನ ಅಧ್ಯಕ್ಷರಾಗಿ ಪಿ.ಎನ್. ಹರಿಶಂಕರ್ ಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ಡಾ.ಎಸ್.ವಿ. ನರಸಿಂಹನ್ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಕಾರ್ಯಕ್ರಮ ನೆರವೇರಿಸಿದ ಈಶ್ವರಭಟ್, ರೋಟರಿ ಸಂಸ್ಥೆಯು ಆರೋಗ್ಯ, ವಿದ್ಯಾಭ್ಯಾಸ , ಅರಣ್ಯ, ಸಮಾಜ, ಪರಿಸರ, ಜಲ ಹೀಗೆ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿರುವ ಬಗ್ಗೆ ವಿವರಿಸಿದರು. ಸಮಾಜ ಸೇವೆ ಮಾಡುವಲ್ಲಿ ರೋಟರಿ ಸಂಸ್ಥೆಯ ಕೊಡುಗೆಯ ಬಗ್ಗೆ ತಿಳಿಸಿದರು.

ವನಸಿರಿ, ವಿದ್ಯಾಸಿರಿ, ಜಲಸಿರಿ ಹಾಗೂ ಆರೋಗ್ಯಸಿರಿ ಎಂಬ ನಾಲ್ಕೂ ಯೋಜನೆಗಳಿಗೆ ಮುಖ್ಯ ಅತಿಥಿಗಳಾದ ಎಂ. ಈಶ್ವರಭಟ್, ಅಸಿಸ್ಟೆಂಟ್ ಗವರ್ನರ್ ರತನ್ ತಮ್ಮಯ್ಯ, ಜೋನಲ್ ಲೆಫ್ಟಿನೆಂಟ್ ನವೀನ್ ಬೆಳ್ಯಪ್ಪ ಹಾಗೂ ವೀರಾಜಪೇಟೆ ರೋಟರಿಯ ಹಿರಿಯ ಸದಸ್ಯ ಎನ್.ಎಸ್. ನಾಣಯ್ಯ ಮತ್ತು ಎನ್.ಯು. ಮೋಹನ್ ಅಯ್ಯಪ್ಪ ಅವರುಗಳು ಚಾಲನೆ ನೀಡಿದರು. ಈ ಸಂದರ್ಭ ಅಸಿಸ್ಟೆಂಟ್ ಗವರ್ನರ್ ರತನ್ ತಮ್ಮಯ್ಯನವರು ಸಂಸ್ಥೆಯ ಇ-ವಾರ್ತಾ ಸಂಚಿಕೆ 'ವಿರೋಟರ್' ಅನ್ನು ಬಿಡುಗಡೆಗೊಳಿಸಿದರು.

ನಿಕಟಪೂರ್ವ ಅಧ್ಯಕ್ಷ ಡಾ.ಲವಿನ್ ಚಂಗಪ್ಪ ಹಾಗೂ ಕಾರ್ಯದರ್ಶಿ ಭರತ್ ರಾಮ್ ರೈಯವರು ವೇದಿಕೆಯಲ್ಲಿದ್ದರು.

ಸಂಸ್ಥೆಯ ನೂತನ ಸಾಲಿನ ವಿವಿಧ ಹುದ್ದೆಗಳಿಗೆ ಭರತ್‌ರಾಮ್ ರೈ, ಬಿ.ಬಿ. ಮಾದಪ್ಪ, ಪೃಥ್ವಿ ಮಾದಯ್ಯ, ಡಾ.ಲವಿನ್ ಚಂಗಪ್ಪ, ಸುನಿಲ್ ನಾಣಯ್ಯ, ಆದಿತ್ಯ, ಎನ್.ಯು. ಮೋಹನ್ ಅಯ್ಯಪ್ಪ, ರವಿ ಎಂ.ಎಸ್., ಬಿ.ಸಿ. ಸುಬ್ಬಯ್ಯ, ಎ.ಎಸ್. ಮಾಚಯ್ಯ, ಬನ್ಸಿ ಪೂವಣ್ಣ, ಉದಯಕುಮಾರ್, ಕೆ.ಎಂ. ಪ್ರವೀಣ್ ಚಂಗಪ್ಪ, ರಾಬಿನ್ ಮಂದಪ್ಪ, ಶಾಂತಾ ರಾಂ ಕಾಮತ್, ಎಂ. ಕೆ ಚಿತ್ರಬಾನು ಹಾಗೂ ಚೇತನ್ ಚೌದರಿ, ಇವರುಗಳು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ರೋಟರಿ ೩೧೮೧ ಜಿಲ್ಲೆಯ ಇತರ ರೋಟರಿ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.