ಮಡಿಕೇರಿ, ಜು. ೨೫: ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಬೃಂಗೇಶ್ ಅವರನ್ನು ಮಡಿಕೇರಿ ವಕೀಲರ ಸಂಘದಿAದ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೂತನ ಸದಸ್ಯ ಕಾರ್ಯದರ್ಶಿ ಕೆ. ಬಿ. ಪ್ರಸಾದ್ ಅವರನ್ನು ಕೂಡ ಸ್ವಾಗತಿಸಲಾಯಿತು. ಸಮಾರಂಭದಲ್ಲಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಶಾಂತಿ. ಜಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್. ಬಿ.ಜಯಲಕ್ಷಿö್ಮ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮುನಿರತ್ನಮ್ಮ ಸಿ. ಎನ್, ಅಪರ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ಎನ್. ಎ. ಹಾಜರಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ. ಡಿ. ದಯಾನಂದ ಅವರು ಅಧ್ಯಕ್ಷತೆ ವಹಿಸಿ ನೂತನವಾಗಿ ಆಗಮಿಸಿದ ನ್ಯಾಯಾಧೀಶರಿಗೆ ಶುಭ ಹಾರೈಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಬೃಂಗೇಶ್ ಮಾತನಾಡಿ ವಕೀಲರು ಮತ್ತು ನ್ಯಾಯಾಧೀಶರು ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ನ್ಯಾಯ ಒದಗಿಸಲು ಸಾಧ್ಯ ಆಗುತ್ತದೆ ಎಂದು ಹೇಳಿದರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೂತನ ಸದಸ್ಯ ಕಾರ್ಯದರ್ಶಿಯಾದ ಕೆ.ಬಿ. ಪ್ರಸಾದ್ ಅವರು ಮಾತನಾಡಿ ಮುಂದೆ ನಡೆಯುವ ಲೋಕ್ ಅದಾಲತ್ ಹಾಗೂ ಇತರ ಕಾರ್ಯಕ್ರಮಗಳಿಗೆ ವಕೀಲರ ಸಂಘದ ಸಹಕಾರ ಬಯಸಿದರು. ವಕೀಲರ ಸಂಘದ ಕಾರ್ಯದರ್ಶಿ ಎಂ. ಕೆ. ಅರುಣ್ ಕುಮಾರ್ ಸರ್ವರನ್ನು ಸ್ವಾಗತಿಸಿದರು. ಉಪಾಧ್ಯಕ್ಷರಾದ ಕೆ.ಎಸ್. ತಮ್ಮಯ್ಯ ಹಾಗೂ ಜಂಟಿ ಕಾರ್ಯದರ್ಶಿ ಎಂ.ವಿ. ಸಂಜಯ್ ರಾಜ್ ನೂತನ ನ್ಯಾಯಾಧೀಶರ ಪರಿಚಯ ಮಾಡಿದರು. ಖಜಾಂಚಿ ಬಿ. ಸಿ. ದೇವಿಪ್ರಸಾದ್ ಸರ್ವರನ್ನು ಸಂಘದ ಪದಾಧಿಕಾರಿ ಗಳಾದ ಡಿ. ಎನ್. ಡೊಮಿನಿಕ್, ಭಾನುಪ್ರಕಾಶ್, ತಾಹ ಯಾಸೀನ್, ಡಿ. ಕೆ. ರಾಜೇಶ್, ಚಂದನ್. ಪಿ. ಆರ್, ಸುದಯ್ ನಾಣಯ್ಯ, ದಿವ್ಯಾ ನಂಜಪ್ಪ, ಲತಾಕುಮಾರಿ ಹಾಗೂ ಸಂಘದ ಸದಸ್ಯರು ಹಾಜರಿದ್ದರು.