ಕುಶಾಲನಗರ, ಜು. ೨೫: ಹಿಂದೂ ವಿವಾಹ ಸಂಬAಧಿತ ಸಂಘಟನೆಯಾಗಿರುವ ವಿಶ್ವ ಹಿಂದೂ ಮಾಂಗಲ್ಯ ಮಂಚ್‌ನ ರಾಷ್ಟಿçÃಯ ಸಮಿತಿಯ ಪ್ರತಿನಿಧಿಗಳು ಕುಶಾಲನಗರಕ್ಕೆ ಭೇಟಿ ನೀಡಿದರು.

ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಮಾಂಗಲ್ಯ ಮಂಚ್‌ನ ಕರ್ನಾಟಕ ಶಾಖೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕುಶಾಲನಗರ ಪ.ಪಂ.ಅಧ್ಯಕ್ಷ ಜೈವರ್ಧನ್, ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷ, ವಿ.ಎಂ.ವಿಜಯನ್, ಪದಾಧಿಕಾರಿಗಳಾದ ಪಿ.ಡಿ.ಪ್ರಕಾಶ್, ಕಿಶೋರ್, ಅಜೀಶ್, ಪ್ರಮುಖರಾದ ಕೆ.ರಾಜನ್, ತಿಮ್ಮಯ್ಯ, ಶೇಖರನ್, ವಿಲಾಸಿನಿ, ಕನಕ, ನಿರ್ಮಲಾ, ವಾಣಿ, ಗೌರಮ್ಮ, ಪುಷ್ಪ, ಕವಿತಾ ಉದಯ ಉಪಸ್ಥಿತರಿದ್ದರು. ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪAಡ ಬೋಸ್ ಮೊಣ್ಣಪ್ಪ , ಗೌಡ ಸಮಾಜದ ಅಧ್ಯಕ್ಷರಾದ ಕೂರನ ಪ್ರಕಾಶ, ಗೌಡ ಯುವವೇದಿಕೆಯ ಅಧ್ಯಕ್ಷ ಕೊಡಗನ ಹರ್ಷ, ಕೇರಳ ಸಮಾಜದ ಅಧ್ಯಕ್ಷ ಶಿವನ್, ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾದ ಕಾರ್ಯದರ್ಶಿ ಮಂಜುಳಾ, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಶ್ವ ಹಿಂದೂ ಮಾಂಗಲ್ಯ ಮಂಚ್‌ನ ರಾಷ್ಟಿçÃಯ ಅಧ್ಯಕ್ಷ ಷಾಜಿ ಮಾನಂತೇರಿ, ಉಪಾಧ್ಯಕ್ಷರಾದ ಜನಚಂದ್ರನ್ ಮಾಸ್ಟರ್, ರಾಷ್ಟಿçÃಯ ಕಾರ್ಯಕಾರಣಿಯ ೧೫ ಮಂದಿಯ ತಂಡ, ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಘೋಷಿತರಾದ ವಿನೋದ್ ಥರಮಲ್, ಕಾರ್ಯದರ್ಶಿ ಕೆ.ವರದ , ಖಜಾಂಚಿ ರಂಜಿತ್ ಇದ್ದರು.