ಮಡಿಕೇರಿ, ಜು. ೨೫: ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಯುವ ಜನಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟಗಳು, ಯೂತ್‌ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕಗ್ಗೋಡ್ಲುವಿನ ಕಾವೇರಿ ಯುವ ಸಂಘದ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನಲ್ಲಿ ನಡೆದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಸಮಾರೋಪ ಸಮಾರಂಭ ನಡೆಯಿತು.

ಅಧ್ಯಕ್ಷತೆಯನ್ನು ಹಾಕತ್ತೂರು ಗ್ರಾ.ಪಂ. ಅಧ್ಯಕ್ಷೆ ಸವಿತಾ ವಹಿಸಿದ್ದರು. ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷ ಅನಿತಾ ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಮೇಚಿರ ಸುಭಾಶ್ ನಾಣಯ್ಯ, ಪ್ರಗತಿಪರ ಕೃಷಿಕ ಮಂದ್ರೀರ ತೇಜಸ್ ನಾಣಯ್ಯ, ಗ್ರಾ.ಪಂ. ಸದಸ್ಯೆ ವಿಜಯಲಕ್ಷಿö್ಮ, ಯೂತ್ ಹಾಸ್ಟೆಲ್‌ನ ರಾಜಶೇಖರ್, ಗೆದ್ದೆಯ ಮಾಲೀಕ ಪೊಡನೋಳಂಡ ಬೋಪಣ್ಣ ಕುಶಾಲಪ್ಪ ಪಾಲ್ಗೊಂಡಿದ್ದರು. ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ಹಾಗೂ ಸದಸ್ಯರು ಹಾಜರಿದ್ದರು.

ಸ್ಪರ್ಧೆಯ ವಿಜೇತರ ವಿವರ

೫೦ ಮೀಟರ್ ಓಟದ ಕಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗ-ದರ್ಶನ್, ಕ್ರೀಡಾಶಾಲೆ ಮಡಿಕೇರಿ (ಪ್ರ), ದೀಕ್ಷಿತ್, ಕ್ರೀಡಾಶಾಲೆ, ಮಡಿಕೇರಿ (ದ್ವಿ), ಪಾರ್ಥ ಎಸ್.ಎಂ.ಎಸ್. ಪರ್ಲಕೋಟಿ (ತೃ); ೫೦ ಮೀಟರ್ ಓಟದ ಬಾಲಕಿಯರ ವಿಭಾಗದಲ್ಲಿ ಪ್ರಕೃತಿ ಕಟ್ಟಿಮಾನಿ (ಪ್ರ), ಮಾನವಿ ಇಬ್ನಿವಳವಾಡಿ (ದ್ವಿ), ಹಿತಪ್ರೀಯ, ಮರಗೋಡು (ತೃ). ೧೦೦ ಮೀಟರ್ ಓಟದ ಹಿರಿಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗ- ದೇಬೆಮಹಿಬಿ, ಕ್ರೀಡಾಶಾಲೆ ಮಡಿಕೇರಿ (ಪ್ರ), ಸಂಜೀತ್, ಕೊಡಗು ವಿದ್ಯಾಲಯ (ದ್ವಿ), ಕನವ್, ಕೊಡಗು ವಿದ್ಯಾಲಯ (ತೃ); ೧೦೦ ಮೀಟರ್ ಓಟದ ಬಾಲಕಿಯರ ವಿಭಾಗ- ನೀಲಮ್ಮ, ಕೊಡಗು ವಿದ್ಯಾಲಯ (ಪ್ರ), ನಿಕ್ಷ, ಜೂನಿಯರ್ ಕಾಲೇಜು, ಮಡಿಕೇರಿ (ದ್ವಿ), ಶಿವಾನ ಎಂ.ಸಿ., ಎಸ್.ಎಂ.ಎಸ್. ವೀರಾಜಪೇಟೆ (ತೃ).

೨೦೦ ಮೀಟರ್ ಓಟದ ಪ್ರೌಢಶಾಲಾ ಬಾಲಕರ ವಿಭಾಗ- ಧ್ಯಾನ್, ಜ್ಞಾನೋದಯ ಶಾಲೆ (ಪ್ರ), ಚಂಗಪ್ಪ ಕೆ.ಡಿ. ಕಾಲೂರು (ದ್ವಿ), ಕವಿನ, ಭಾಗಮಂಡಲ (ತೃ); ೨೦೦ ಮೀಟರ್ ಬಾಲಕಿಯರ ವಿಭಾಗ- ರೀಯ, ಜ್ಞಾನಜ್ಯೋತಿ, ಮೂರ್ನಾಡು (ಪ್ರ), ಅಚ್ಚಪಂಡ ಪರ್ಲಿನ್ ಪೊನ್ನಮ್ಮ, ಕೊಡಗು ವಿದ್ಯಾಲಯ, ಮಡಿಕೇರಿ (ದ್ವಿ), ಪ್ರಾಪ್ತಿ ಪಿ.ರೈ. ಮಡಿಕೇರಿ (ತೃ); ೪೦೦ ಮೀಟರ್ ಓಟದ ಪದವಿ ಪೂರ್ವ ಕಾಲೇಜು ಬಾಲಕರ ವಿಭಾಗ - ರಮೇಶ್, ಕ್ರೀಡಾಶಾಲೆ, ಕೂಡಿಗೆ (ಪ್ರ), ಸಜೀನ, ಕ್ರೀಡಾಶಾಲೆ ಕೂಡಿಗೆ (ದ್ವಿ), ಲಿಕಿತ್, ನಾಪೋಕ್ಲು (ತೃ). ೪೦೦ ಮೀಟರ್ ಬಾಲಕಿಯರ ವಿಭಾಗ- ಮಾನಸ, ಕ್ರೀಡಾಶಾಲೆ, ಕೂಡಿಗೆ (ಪ್ರ), ಸಹಾನ, ಕೂಡಿಗೆ ಕ್ರೀಡಾಶಾಲೆ (ದ್ವಿ), ಶ್ರೀರಕ್ಷ, ಕೂಡಿಗೆ ಕ್ರೀಡಾಶಾಲೆ (ತೃ).

೪೦೦ ಮೀಟರ್ ಓಟದ ಪದವಿ ಕಾಲೇಜು ಬಾಲಕರ ವಿಭಾಗ -ರಮೇಶ್, ಕೂಡಿಗೆ ಕ್ರೀಡಾಶಾಲೆ (ಪ್ರ), ಸಚಿನ್, ಕೂಡಿಗೆ ಕ್ರೀಡಾಶಾಲೆ (ದ್ವಿ), ಲತೀಶ, ಅಯ್ಯಂಗೇರಿ (ತೃ). ೪೦೦ ಮೀಟರ್ ಓಟದ ಬಾಲಕಿಯರ ವಿಭಾಗ- ಹರ್ಷಿತ್, ಮಡಿಕೇರಿ (ಪ್ರ), ಶ್ವೇತ, ಚೆಟ್ಟಿಮಾನಿ (ದ್ವಿ), ಭವ್ಯ ಕಗ್ಗೋಡ್ಲು (ತೃ). ೩೦೦ ಮೀಟರ್ ಓಟದಲ್ಲಿ ೪೦ ವರ್ಷಕ್ಕೆ ಮೇಲ್ಪಟ್ಟ ಪುರುಷರ ವಿಭಾಗ- ನವೀನ ಭಾಗಮಂಡಲ (ಪ್ರ), ಸೂದನ ಎಸ್. ಡಾಲಿ, ಪಾಲೂರು (ದ್ವಿ), ನಾಗೇಶ್, ಮರಗೋಡು (ತೃ); ಮಹಿಳೆಯರ ವಿಭಾಗ ಮಮತ, ಸುಳ್ಯ (ಪ್ರ), ಎ.ಬಿ. ಲಲಿತಾ, ವೀರಾಜಪೇಟೆ (ದ್ವಿ), ಪ್ರಮೀಳ, ಸುಳ್ಯ (ತೃ).

ಸಾರ್ವಜನಿಕ ಪುರುಷರ ಮುಕ್ತ ಓಟದ ವಿಭಾಗ - ಸುಳಿ ಕುಂಜಿಲ (ಪ್ರ), ಗಗನ್ ಜೀವನ್, ಚೇಲಾವರ (ದ್ವಿ); ದೇವಜನ ಪುನಿತ್, ಸಿದ್ದಾಪುರ (ತೃ). ಮಹಿಳೆಯರ ವಿಭಾಗ - ಸಹನ, ಕ್ರೀಡಾಶಾಲೆ ಕೂಡಿಗೆ (ಪ್ರ), ಸ್ನೇಹ, ಕ್ರೀಡಾಶಾಲೆ, ಕೂಡಿಗೆ (ದ್ವಿ), ಪ್ರಗತಿ, ಕೂಡಿಗೆ ಕ್ರೀಡಾಶಾಲೆ (ತೃ) ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸಾರ್ವಜನಿಕ ಮಹಿಳಾ ಥ್ರೋಬಾಲ್ ಪಂದ್ಯಾಟದಲ್ಲಿ ಬ್ಲಾö್ಯಕ್ ಪ್ಯಾಂತರ್ಸ್ (ಪ್ರ), ಕನ್ನಿಕಾ ಯುವತಿ ಮಂಡಳಿ, ಕುಂಬಳದಾಳು (ದ್ವಿ); ಸಾರ್ವಜನಿಕರ ಪುರುಷರ ಹಗ್ಗ-ಜಗ್ಗಾಟ ವಿಭಾಗ - ಮದೆನಾಡು ಕಾಫಿ ಲಿಂಕ್ಸ್ (ಪ್ರ), ಪೊಳಲಿ ಫ್ರೆಂಡ್ಸ್, ಪೊಳಲಿ (ದ್ವಿ); ಮಹಿಳಾ ವಿಭಾಗದಲ್ಲಿ ನಾಗಶ್ರೀ ಫ್ರೆಂಡ್ಸ್, ಸುಳ್ಯ (ಪ್ರ), ಲೋಪಮುದ್ರ ತಂಡ, ಕುಶಾಲನಗರ (ದ್ವಿ). ಸಾರ್ವಜನಿಕ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಎಸ್.ಕೆ.ಪಿ. ಪೊನ್ನಂಪೇಟೆ ತಂಡ (ಪ್ರ), ಅಜ್ನಾನ್ಸ್ ತಂಡ, ಕುಶಾಲನಗರ (ದ್ವಿ) ಸ್ಥಾನವನ್ನು ಪಡೆದುಕೊಂಡಿದೆ.