ಶ್ರೀಮಂಗಲ, ಜು. ೨೫: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೈದಾನ ಆವರಣವನ್ನು ಅಂಜಿಕೇರಿ ನಾಡ್ ಕೂಟದ ಸದಸ್ಯರು ಶ್ರಮದಾನ ಮಾಡುವುದರ ಮೂಲಕ ಸ್ವಚ್ಛಗೊಳಿಸಿದರು.
ಹಲವಾರು ಸಾಮಾಜಿಕ ಚಟುವಟಿಕೆಗಳ ಜೊತೆಗೆ ಈ ಮೈದಾನದ ಸ್ವಚ್ಛತೆ ಹಾಗೂ ನಿರ್ವಹಣೆಯ ಹೊಣೆ ಹೊತ್ತುಕೊಂಡು ಬಂದಿರುವ ಈ ಯುವ ಒಕ್ಕೂಟ, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಮೈದಾನವು ಒಂದು ಸರ್ಕಾರಿ ಶಾಲೆಯ ಸ್ವತ್ತಾಗ್ಗಿದ್ದು, ಇದರ ನಿರ್ವಹಣೆಯ ಖರ್ಚನ್ನು ಸಂಘದ ಸದಸ್ಯರು ಸ್ವ ಇಚ್ಚೆಯಿಂದ ಸ್ವತಃ ತಾವೇ ಭರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಬAಧಪಟ್ಟ ಸರ್ಕಾರಿ ಇಲಾಖೆಯು ಈ ಸಂಘದ ಪರಿಶ್ರಮವನ್ನು ಗುರುತಿಸಿ ಇದರ ಬಗ್ಗೆ ಗಮನಹರಿಸಲಿ ಎಂಬ ಆಶಾಭಾವನೆ ಇವರದ್ದಾಗಿದೆ.