ನಾಪೋಕ್ಲು, ಜು. ೨೫: ನಾಪೋಕ್ಲು ವ್ಯಾಪ್ತಿಯ ಅಲ್ಲಲ್ಲಿ ಭತ್ತದ ನಾಟಿ ಕಾರ್ಯ ಆರಂಭಗೊAಡಿದೆ. ಭತ್ತದ ಕೃಷಿ ಲಾಭದಾಯಕವಲ್ಲ ಎನ್ನುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಹುತೇಕ ಮಂದಿ ಭತ್ತದ ಕೃಷಿಯನ್ನು ಕೈಬಿಟ್ಟಿದ್ದಾರೆ. ಆದರೆ, ಹಿಂದಿನಿAದಲೂ ಸಾಂಪ್ರದಾಯಿಕ ಕೃಷಿ ಮಾಡಿಕೊಂಡು ಬಂದಿರುವ ರೈತರು ಮಾತ್ರ ಲಾಭ ನಷ್ಟದ ಬಗ್ಗೆ ಚಿಂತೆ ಮಾಡದೆ ಭತ್ತದ ಕೃಷಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ಅದರಂತೆ ಕೊಳಕೇರಿ ಗ್ರಾಮದ ಪ್ರಗತಿಪರ ಕೃಷಿಕ ಅಪ್ಪಾರಂಡ ಸುಧೀರ್ ಹಿಂದಿನಿAದಲೂ ಸಾಂಪ್ರದಾಯಿಕ ಕೃಷಿ ಮಾಡಿಕೊಂಡು ಬಂದಿರುವ ರೈತರು ಮಾತ್ರ ಲಾಭ ನಷ್ಟದ ಬಗ್ಗೆ ಚಿಂತೆ ಮಾಡದೆ ಭತ್ತದ ಕೃಷಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ಅದರಂತೆ ಕೊಳಕೇರಿ ಗ್ರಾಮದ ಪ್ರಗತಿಪರ ಕೃಷಿಕ ಅಪ್ಪಾರಂಡ ಸುಧೀರ್ ಅಯ್ಯಪ್ಪ. ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಇವರು ಕಾಲ ಕಾಲಕ್ಕೆ ಸರಿಯಾಗಿ ಕೃಷಿ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸುಮಾರು ಹದಿನೈದು ಏಕರೆ ಭತ್ತದ ನಾಟಿ ಕಾರ್ಯ ಕೈಗೊಂಡಿರುವ ಇವರು ಭತ್ತದ ಕೃಷಿಯನ್ನು ಕೈಬಿಟ್ಟರೆ ಕೊಡಗಿನ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ ಎಂದು ಇತರರಿಗೆ ಕಿವಿ ಮಾತು ಹೇಳುತ್ತಾರೆ. ೧೫ ಎಕರೆಯಷ್ಟು ಕೃಷಿ ಕೆಲಸ ಇತರರಿಗೆ ಪ್ರೇರಣೆಯಂತಿದೆ.

ಇವರ ಭತ್ತದ ಗದ್ದೆಯಲ್ಲಿ ಸಂತಸದಿAದ ಪೈರು ಕೀಳುತ್ತಿರುವ ಮಹಿಳೆಯರು ಹಾಗೂ ನಾಟಿ ಗದ್ದೆಯಲ್ಲಿ ಹಾಸ್ಯ ಚಟಾಕಿಯೊಂದಿಗೆ ಸಸಿ ನಾಟಿ ಮಾಡುತ್ತಿರುವ ದೃಶ್ಯ ಕಂಡು ಬಂತು. ಇಂತಹ ಸುಂದರ ಸನ್ನಿವೇಶಗಳನ್ನು ಇತ್ತೀಚಿಗೆ ಕಾಣುವುದು ಅಪರೂಪ ಎನ್ನುವ ಮಾತುಗಳು ಜನ ವಲಯದಲ್ಲಿ ಕೇಳಿಬರುತ್ತಿದೆ.

-ಪಿ.ವಿ.ಪ್ರಭಾಕರ್