ಕಣಿವೆ, ಜು. ೨೪ : ಕಳೆದ ಹಲವು ವರ್ಷಗಳ ನಂತರ ಈ ವರ್ಷ ಅಧಿಕ ಮಳೆ ಸುರಿದ ಪರಿಣಾಮ ರೈತರು ಕೈಗೊಂಡಿರುವ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ. ಜೋಳ, ತರಕಾರಿ, ಶುಂಠಿ ಮತ್ತಿತರ ಬೆಳೆ ಬೆಳೆದ ಭೂಮಿಯಲ್ಲಿ ಮಳೆಯ ನೀರು ಇಂಗುತ್ತಿಲ್ಲ. ಹಾಗಾಗಿ ಮಳೆಯ ನೀರು ನಿಂತು ಭೂಮಿಯೆಲ್ಲಾ ಶೀತಪೀಡಿತಗೊಂಡಿದ್ದು, ಹಸು ಎತ್ತುಗಳನ್ನು ಭೂಮಿಗಿಳಿಸಿ ಉಳುಮೆ ಮಾಡಲು, ನೇಗಿಲು ಅಥವಾ ಕುಂಟೆ ಹೊಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸುಲಭ ಉಪಾಯ ಕಂಡುಕೊAಡ ಕೆಲ ಕೃಷಿಕರು, ತಮಗೆ ತುಸು ತ್ರಾಸವಾದರೂ ತೊಂದರೆಯಿಲ್ಲವೆAದು ಮನೆ ಮಂದಿಯ ಅಥವಾ ಕೃಷಿ ಕಾರ್ಮಿಕರ ಮೂಲಕ ಕುಂಟೆ ಉಳುಮೆಗೆ ಮುಂದಾಗಿರುವ ಚಿತ್ರಣ ಕಣಿವೆ ಬಳಿಯ ಗ್ರಾಮವೊಂದರಲ್ಲಿ ಕಂಡುಬAತು.
ಈ ಬಗ್ಗೆ ‘ಶಕ್ತಿ' ಯೊಂದಿಗೆ ಮಾತನಾಡಿದ ಕೃಷಿಕ ಜವರೇಗೌಡ, ಮಳೆ ವಿಪರೀತ ಸುರಿದ ಕಾರಣ ಭೂಮಿ ಒಣಗುತ್ತಿಲ್ಲ. ಮಳೆಯ ನೀರು ಇಂಗುತ್ತಿಲ್ಲ. ಹಾಗಾಗಿ ತರಕಾರಿ ಕಾಯಿ ಪಲ್ಯೆಗಳ ಬೆಳೆ ನಿರ್ವಹಣೆ ಇಲ್ಲದೆ ನೆಲಕಚ್ಚಿವೆ. ಹಾಗಾಗಿ ಕಳೆ ತೆಗೆಯಲು ಮತ್ತು ಗಿಡಗಳ ಬುಡಕ್ಕೆ ಮಣ್ಣು ಹಾಕಲು ಮನುಷ್ಯರ ಸಹಾಯದಿಂದ ಕುಂಟೆ ಹೊಡೆಯುತ್ತಿದ್ದೇವೆ ಎಂದು ಹೇಳಿದರು.