ಶನಿವಾರಸಂತೆ, ಜು. ೨೪: ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಸಿ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ೩೬ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.
ಸಂಘದ ಮುಖ್ಯಮಂತ್ರಿಯಾಗಿ ರುದ್ವಿಕ್ ದಿ. ಗೌಡ, ಬಿ.ಎಲ್. ಶಮಂತ್ ಉಪಮುಖ್ಯಮಂತ್ರಿ, ಬಿ.ಸಿ. ಮಾನ್ಯ ಹಣಕಾಸು ಮಂತ್ರಿ, ಕೆ.ಹೆಚ್. ಪ್ರೇಕ್ಷಿತ್ ಆರೋಗ್ಯ ಮಂತ್ರಿ, ಸನಾನ್ಯ ಪಿ. ನಾಯಕ್ ಸಾಂಸ್ಕೃತಿಕ ಮಂತ್ರಿ, ಜೀವಿತಾ ಶಿಕ್ಷಣ ಮಂತ್ರಿ, ಧನುಷ್ ಶೆಟ್ಟಿ ಸಂಸದ, ಬಿ.ಎಂ. ಚಂದ್ರಶೇಖರ್, ಕ್ರೀಡಾ ಮಂತ್ರಿ, ಬಿ.ಟಿ. ಚೈತನ್ಯ ಆಹಾರ ಮಂತ್ರಿಯಾಗಿ ಆಯ್ಕೆಯಾಗಿದ್ದು, ಪ್ರಮಾಣ ವಚನ ಸ್ವೀಕರಿಸಿದರು.
ಚುನಾವಣಾಧಿಕಾರಿಗಳಾಗಿ ಶಿಕ್ಷಕರಾದ ಯೋಗೇಶ್ ಹಾಗೂ ಅಶ್ವಥ್ ಕಾರ್ಯನಿರ್ವಹಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಯಿತು. ಪ್ರಾಂಶುಪಾಲೆ ಡಿ. ಸುಜಲಾದೇವಿ, ಶಿಕ್ಷಕರು ಹಾಜರಿದ್ದರು.