ಕೂಡಿಗೆ, ಜು. ೨೪: ಬಿರುಕುಬಿಟ್ಟಿದ್ದ ಹಾರಂಗಿಯ ಮುಖ್ಯ ನಾಲೆಯ ದುರಸ್ತಿ ಕಾರ್ಯ ಆರಂಭಗೊAಡಿದೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಲಪುರ ಸಮೀಪದ ಮಾತ್ತಹಳ್ಳ ಎಂಬಲ್ಲಿ ಹಾರಂಗಿ ನಾಲೆಯ ಮುಖ್ಯ ಕಾಲುವೆ ಇದ್ದು, ಈ ಕಾಲುವೆಯು ಕಳೆದ ಕೆಲ ದಿನಗಳಿಂದ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ದುರಸ್ತಿ ನಡೆಸಲಾಗುತ್ತಿದೆ.

ಸ್ಥಳಕ್ಕೆ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ಸಿದ್ದರಾಜು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.