ಸುಂಟಿಕೊಪ್ಪ, ಜು. ೨೪ : ಉಲುಗುಲಿ ಗ್ರಾಮ ಪಂಚಾಯಿತಿಯ ನಾರ್ಗಾಣೆ ಗ್ರಾಮದ ಮೊಹನ್ ಕುಮಾರ್ ಎಂಬವರ ತೋಟದಲ್ಲಿ ಭಾರೀ ಗಾಳಿಮಳೆಗೆ ಎಂಟು ಅಡಿಕೆ ಮರಗಳು ಮುರಿದು ಬಿದ್ದು ಕಾಫಿ ಗಿಡಗಳು, ಕಾಳುಮೆಣಸಿನ ಬಳ್ಳಿಗಳು ನಾಶವಾಗಿ ೪೦ ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಮಳೆಯ ರೌದ್ರಾವತಾರದಿಂದ ಸುಂಟಿಕೊಪ್ಪ ವ್ಯಾಪಿಯಲ್ಲಿ ಕಾಫಿ ಕೊಳೆರೋಗಕ್ಕೆ ತುತ್ತಾಗಿ ಕಾಫಿ ಬೆಳೆಗಾರರು ತತ್ತರಿಸಿದ್ದಾರೆ. ಕಾಫಿ ಮಂಡಳಿಯವರು ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.