ಮಡಿಕೇರಿ, ಜು. ೨೪: ಭಾರತ ಸ್ವತಂತ್ರವಾಗಿ ೭೫ ವರ್ಷ ಪೂರೈಸುತ್ತಿದೆ. ದೇಶವನ್ನು ಬಂದಮುಕ್ತಗೊಳಿಸುವಲ್ಲಿ ಲಕ್ಷಾಂತರ ವೀರರು ಹೋರಾಡಿದ್ದಾರೆ. ಅದರಲ್ಲಿ ನೂರಾರು ಸಂಖ್ಯೆಯಲ್ಲಿ ಕೊಡವರೂ ಕೂಡ ದೇಶಮಾತೆಯ ಬಿಡುವಿಗಾಗಿ ತಮ್ಮ ಜೀವ ಮತ್ತು ಜೀವನವನ್ನು ಸವೆಸಿದ್ದಾರೆ. ಇಂತಹ ಅನರ್ಘ್ಯ ರತ್ನಗಳನ್ನು ನೆನೆಸಿಕೊಳ್ಳುವ ಸಲುವಾಗಿ, ಕೊಡವಾಮೆರ ಕೊಂಡಾಟ ಸಂಘಟನೆಯು ‘ಸ್ವಾತಂತ್ರ ಚಳುವಳಿಲ್ ಕೊಡವ’ ಎನ್ನುವ ವಿಚಾರದಲ್ಲಿ, ಮುಕ್ತ ಪ್ರಬಂಧ ಸ್ಪರ್ಧೆ ಆಯೋಜಿಸಿದೆ ಎಂದು ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ, ತಮಗೆ ಗೊತ್ತಿರುವಷ್ಟು ಕೊಡವ ಸ್ವಾತಂತ್ರ ಹೋರಾಟಗಾರರ ಹೆಸರಿನೊಂದಿಗೆ ಅವರ ಹೋರಾಟ, ಬದುಕಿನ ವಿವರವನ್ನು, ಕೊಡವ ಭಾಷೆ, ಕನ್ನಡ ಲಿಪಿಯಲ್ಲಿ, ಸಾವಿರ (೧೦೦೦) ವಾಕ್ಯಗಳಿಗೆ ಮೀರದಂತೆ, ಸ್ಪಷ್ಟವಾಗಿ ಬರೆದು ಅಥವಾ ಟೈಪಿಂಗ್ ಮಾಡಿ ಕೊಡವಾಮೆರ ಕೊಂಡಾಟ, ಪೋಸ್ಟ್ ಬಾಕ್ಸ್ ಸಂಖ್ಯೆ:-೦೭ ವೀರಾಜಪೇಟೆ, ಕೊಡಗು- ೫೭೧೨೧೮ ಈ ವಿಳಾಸಕ್ಕೆ ಅಗಸ್ಟ್ ೧೦ ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕು.

ಸ್ಪರ್ಧೆಯಲ್ಲಿ ಯಾವುದೇ ವಯಸ್ಸು, ಜಾತಿ-ಧರ್ಮದ ಮಿತಿಯಿಲ್ಲದೆ ಯಾರು ಬೇಕಾದರೂ ಭಾಗವಹಿಸಬಹುದು. ವಿಜೇತರಿಗೆ ಪ್ರಥಮ ರೂ. ೫೦೦೦ ನಗದು, ಟ್ರೋಫಿ ಮತ್ತು ಅಭಿನಂದನಾ ಪತ್ರ, ದ್ವಿತೀಯ ರೂ. ೪೦೦೦ ನಗದು, ಟ್ರೋಫಿ ಮತ್ತು ಅಭಿನಂದನಾ ಪತ್ರ, ತೃತೀಯ ರೂ. ೩೦೦೦ ನಗದು, ಟ್ರೋಫಿ ಮತ್ತು ಅಭಿನಂದನಾ ಪತ್ರ ಹಾಗೂ ಭಾಗವಹಿಸುವ ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರ ನೀಡಲಾಗುವುದು.

ಸ್ಪರ್ಧೆಯ ಎಲ್ಲಾ ನಗದು, ಟ್ರೋಫಿ ಮತ್ತು ಪ್ರಸಂಶನಾ ಪತ್ರಗಳನ್ನು, ವಿ. ಬಾಡಗ ಗ್ರಾಮದ, ದಿವಂಗತ ಕೊಂಗAಡ ಮಾದಪ್ಪ, ಕಮಲ ಮಾದಪ್ಪ ಅವರ ನೆನಪಿನಲ್ಲಿ ಮಗ ಕೊಂಗAಡ ಕಾಶಿ ಕಾರ್ಯಪ್ಪ ಮತ್ತು ಸಂಸಾರ ಪ್ರಾಯೋಜಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಸ್ಪರ್ಧಾ ಸಂಚಾಲಕ ಮಲ್ಲಂಡ ದರ್ಶನ್ ಮುತ್ತಪ್ಪ ೯೪೪೯೬೯೯೮೨೬ ಅವರನ್ನು ಸಂಪರ್ಕಿಸಬಹುದು.