ವೀರಾಜಪೇಟೆ, ಜು. ೨೪: ಗ್ರಾಮೀಣ ಕ್ರೀಡೆಗಳು ತನ್ನದೇಯಾದ ಮಹತ್ವವನ್ನು ಪಡೆದಿದ್ದು ಅದರಲ್ಲೂ ಕೆಸರು ಗದ್ದೆ ಕ್ರೀಡಾಕೂಟ ತನ್ನದೇ ಇತಿಹಾಸ ಹೊಂದಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ವತಿಯಿಂದ ಆರ್ಜಿ ಗ್ರಾಮದಲ್ಲಿರುವ ಭತ್ತದ ಗದ್ದೆಯಲ್ಲಿ ಜರುಗಿದ ಕೆಸರು ಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ ಬಿ. ಡಿ, ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಪ್ರಮೀಳ, ಸಿಸ್ಟರ್ ರೋಸಿ ಡೈಸ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಬೆನ್ನಿ ಜೋಸೆಫ್, ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ವಿ. ರಾಜ ರೈ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ಬಾಲಕರ ಹಗ್ಗಜಗ್ಗಾಟದಲ್ಲಿ ಅಂತಿಮ ಬಿಸಿಎ ಪ್ರಥಮ ಹಾಗೂ ಅಂತಿಮ ಬಿ.ಕಾಂ. ಬಿ ವಿಭಾಗ ದ್ವಿತೀಯ ಸ್ಥಾನವನ್ನು ಪಡೆಯಿತು.

ಬಾಲಕಿಯರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಅಂತಿಮ ಬಿ.ಕಾಂ. ಬಿ ವಿಭಾಗ ಪ್ರಥಮ ಸ್ಥಾನ ಹಾಗೂ ಪ್ರಥಮ ಬಿಬಿಎ ದ್ವಿತೀಯ ಸ್ಥಾನವನ್ನು ಪಡೆಯಿತು. ಬಾಲಕರ ಓಟದ ಸ್ಪರ್ಧೆಯಲ್ಲಿ ಶಾಹಿದ್ ಪ್ರಥಮ, ಜೀತನ್ ದ್ವಿತೀಯ, ಹಾಗೂ ಆದರ್ಶ್ ತೃತೀಯ ಸ್ಥಾನವನ್ನು ಪಡೆದರು.

ಬಾಲಕಿಯರ ವಿಭಾಗದಲ್ಲಿ ಟೀಯ ಪ್ರಥಮ, ಯಶ್ಮಿತಾ ದ್ವಿತೀಯ ಹಾಗೂ ರಶ್ಮಿ ತೃತೀಯ ಸ್ಥಾನ ಗಳಿಸಿದರು.