*ಗೋಣಿಕೊಪ್ಪ, ಜು. ೨೪: ಸೈಬರ್ ಕ್ರೆöÊಂ, ಮಾದಕ ವಸ್ತು ಸೇವನೆ ಅಪರಾಧ ಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸ ಲಾಗುವುದು ಎಂದು ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಕೆ.ಪಿ. ದೀಕ್ಷಿತ್ ಮಾಹಿತಿ ನೀಡಿದರು.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಕೂನ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಜನಭೇಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳಲ್ಲಿ ಸ್ಮಾರ್ಟ್ ಫೋನ್ ಬಳಕೆಯಿಂದ ಸೈಬರ್ ಕ್ರೆöÊಂ ಹೆಚ್ಚಾಗುತ್ತಿರುವ ಬಗ್ಗೆ ಪಾಲಕರು ಗಮನ ಹರಿಸಬೇಕಿದೆ. ಬ್ಯಾಂಕ್ ಖಾತೆಗೆ ಕನ್ನ ಹಾಕುವವವರು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಿಯಂತ್ರಿಸಲು ಹೆಚ್ಚು ಜಾಗೃತಿ ಮೂಡಿಸಲಾಗುವುದು. ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಚಟಕ್ಕೆ ಒಳಗಾಗುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಲಾಗುವುದು.

ಟ್ರಾಫಿಕ್ ಸಮಸ್ಯೆ ನೀಗಿಸಲು ನಮ್ಮ ಸಿಬ್ಬಂದಿ ಪ್ರಯತ್ನ ಪಡುತ್ತಿದ್ದಾರೆ. ವಾಹನ ದಟ್ಟಣೆ ಇರುವ ಕಡೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು. ಜನರ ಸಹಕಾರ ಕೂಡ ಉತ್ತಮವಾಗಿರುವುದರಿಂದ ಇಲಾಖೆಗೆ ಪ್ರೋತ್ಸಾಹ ಸಿಗುತ್ತಿದೆ. ಲಯನ್ಸ್ ಶಾಲೆ, ಕಾವೇರಿ ಕಾಲೇಜು ಮುಖ್ಯ ರಸ್ತೆಯಲ್ಲಿ ಬ್ಯಾರಿಕೆಡ್ ಅಳವಡಿಸುವುದು, ಚೀತಾ ದ್ವಿಚಕ್ರ ವಾಹನದ ಮೂಲಕ ಸಿಬ್ಬಂದಿ ನಿಯೋಜಿಸಿ ಅತೀ ವೇಗದ ವಾಹನ ಸವಾರರ ಮೇಲೆ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.

ಗ್ರಾಮ ಮಟ್ಟದಲ್ಲಿ ಬಂದೂಕು ನೋಂದಣಿ ಅಭಿಯಾನ ನಡೆಸಲಾಗುವುದು. ಇದರಿಂದ ಹಿರಿಯರು ಠಾಣೆಗೆ ಬರುವುದು ತಪ್ಪುತ್ತದೆ. ಪಾಸ್‌ಪೋರ್ಟ್ಸ್ ಪರಿಶೀಲನೆಯನ್ನು ಆದಷ್ಟು ಖುದ್ದು ಮನೆಗೆ ತೆರಳಿ ಪರಿಶೀಲಿಸಿ ನೀಡುವ ನಿಯಮವನ್ನು ಪ್ರಾಯೋಗಿಕವಾಗಿ ನಡೆಸಲಾಗುವುದು ಎಂದರು.

ಟ್ರಾಫಿಕ್ ಸಮಸ್ಯೆ ನೀಗಿಸಲು ಹಾಗೂ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪತ್ರಕರ್ತರು ಒಂದಷ್ಟು ಸಲಹೆ ನೀಡಿದರು.

ಸಂಘಧ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಎನ್.ಎನ್. ದಿನೇಶ್, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಖಜಾಂಚಿ ವಿ.ವಿ. ಅರುಣ್ ಕುಮಾರ್, ಕಾರ್ಯದರ್ಶಿ ಮಂಡೇಡ ಅಶೋಕ್, ನಿರ್ದೇಶಕರಾದ ಚಿಮ್ಮಣಮಾಡ ದರ್ಶನ್ ದೇವಯ್ಯ, ಎಂ.ಎA. ಚನ್ನನಾಯಕ, ಎಚ್.ಆರ್. ಸತೀಶ್, ಸದಸ್ಯರಾದ ಹೆಚ್.ಕೆ. ಜಗದೀಶ್, ಡಿ. ನಾಗೇಶ್ ಇದ್ದರು.