ಸುಂಟಿಕೊಪ್ಪ, ಜು. ೨೪: ಇಲ್ಲಿನ ವಾಹನ ಚಾಲಕರÀ ಮತ್ತು ಮಾಲೀಕರ ಸಂಘದ ವಾರ್ಷಿಕ ವiಹಾಸಭೆ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಂತರ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಸತತವಾಗಿ ೫ನೇ ಬಾರಿಗೆ ಹಾಲಿ ಅಧ್ಯಕ್ಷ ಬಿ.ಎಂ. ಪೂವಪ್ಪ ಅವರು ೨೦೨೨-೨೩ನೇ ಸಾಲಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಬಿ.ಎ. ಕೃಷ್ಣಪ್ಪ ಹಾಗೂ ಅಂಬೆಕಲ್ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಕುಂಞಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಸಾಬು, ಶಕ್ತಿವೇಲು, ಆತಿಕ್ ಮತ್ತು ಎಸ್. ಸುರೇಶ್. ಗೌರವ ಅಧ್ಯಕ್ಷರಾಗಿ ಅಚ್ಚುಪ್ಪ, ಸಮಿತಿ ಸದಸ್ಯರುಗಳಾಗಿ ಪಿ.ಎಸ್. ರಕ್ಷಿತ್, ಇನಾಸ್ ಡಿಸೋಜ, ಅಬ್ದುಲ್ ಕುಟ್ಟಿ, ಅಣ್ಣಪ್ಪ, ಬಿ.ಕೆ. ಸುರೇಶ್, ವಿನೋದ್, ನೌಶಾದ್, ಸಂದೀಪ್, ಬಿಪಿನ್ ಕುಟ್ಟಿ, ಸಿ.ಎ. ಬಸಪ್ಪ, ಆಯ್ಕೆಯಾದರು.