ಮಡಿಕೇರಿ, ಜು. ೨೪: ಪೊನ್ನಂಪೇಟೆ ನ್ಯಾಯಾಲಯದಲ್ಲಿ ಆಗಸ್ಟ್ ೧೩ ರಂದು ನಡೆಯುವ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮದ ಪೂರ್ವಭಾವಿ ಸಭೆ ನ್ಯಾಯಾಧೀಶೆ ಕೆ.ಎಸ್. ಆಶಾ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ನ್ಯಾಯಾಲಯದಲ್ಲಿ ನಡೆಯಿತು. ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ಮುತ್ತಪ್ಪ, ಕಾರ್ಯದರ್ಶಿ ಮೋನಿ ಪೊನ್ನಪ್ಪ, ಹಿರಿಯ ವಕೀಲರಾದ ಮತ್ತು ಬ್ಯಾಂಕ್ ಕಾನೂನು ಸಲಹೆಗಾರ ಎಂ.ಟಿ. ಕಾರ್ಯಪ್ಪ, ಎಸ್.ಡಿ. ಕಾವೇರಪ್ಪ, ವಕೀಲರಾದ ಟಿ.ಎಂ. ಅಣ್ಣಯ್ಯ, ಬಿ.ಎಸ್. ಕುಮಾರಿ, ಎಂ.ಸಿ. ಪೂವಣ್ಣ ಪೊನ್ನಂಪೇಟೆ ಕುಟ್ಟ-ಗೋಣಿಕೊಪ್ಪ ಪಿಎಸ್‌ಐ, ಕೆನರಾ ಬ್ಯಾಂಕ್, ಇಗ್ಗುತಪ್ಪ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರವನ್ನು ನ್ಯಾಯಾಧೀಶರಾದ ಆಶಾ ಅವರು ಮನವಿ ಮಾಡಿದರು. ಈ ಬಾರಿ ಅನೇಕ ಪ್ರಕರಣ ಲೋಕ ಅದಾಲತ್‌ನಲ್ಲಿ ಮುಗಿಯಲಿದ್ದು, ಕಕ್ಷಿದಾರರು ಇದರಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.