ಮಡಿಕೇರಿ, ಜು. ೨೪: ರೋಟರಿ ಇನ್ನರ್ ವ್ಹೀಲ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಗರದ ರೋಟರಿ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷೆ ರೇಣುಕಾ ಸುಧಾಕರ್, ಉಪಾಧ್ಯಕ್ಷೆ ನಮಿತಾ ರೈ, ಕಾರ್ಯದರ್ಶಿ ಲಲಿತಾ ರಾಘವನ್, ಸಹ ಕಾರ್ಯದರ್ಶಿ ದೇಚು ಶ್ಯಾಮ್, ಐಪಿಪಿ ಶಫಾಲಿ ರೈ, ಖಜಾಂಚಿ ನಿಶಾ ಮೋಹನ್, ಸಂಪಾದಕಿ ಪವಿತ್ರ ನಿವಿನ್, ಐಎಸ್‌ಓ ದಿವ್ಯ ಮುತ್ತಣ್ಣ ಹಾಗೂ ಪದಾಧಿಕಾರಿಗಳಿಗೆ ಮುಖ್ಯ ಅತಿಥಿ ಡಾ. ಜಯಲಕ್ಷಿö್ಮ ಪಾಟ್ಕರ್, ನೇಮಕ ಅಧಿಕಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷೆ ಪೂರ್ಣಿಮಾ ರವಿ ಪ್ರತಿಜ್ಞಾವಿಧಿ ಬೋಧಿಸಿದರು.

ನೂತನ ಸದಸ್ಯರಾದ ರಾಧಿಕ, ಸ್ವಪ್ನ, ಶ್ವೇತ ಕಾರ್ಯಪ್ಪ ಹಾಗೂ ಲಕ್ಷಿö್ಮ ತಿಮ್ಮಯ್ಯ ಅವರನ್ನು ಡಾ. ಜಯಲಕ್ಷಿö್ಮ ಪಾಟ್ಕರ್ ನೇಮಕ ಮಾಡಿ ಸಂಸ್ಥೆಗೆ ಬರಮಾಡಿ ಕೊಂಡರು. ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ಎನ್.ಸಿ. ಕಾರ್ಯಪ್ಪ "ಗಿರಿ ಶೃಂಗ" ಸಂಚಿಕೆ ಬಿಡುಗಡೆ ಮಾಡಿದರು. ವೈದ್ಯರ ದಿನದ ಪ್ರಯುಕ್ತ ಮಡಿಕೇರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಇಎನ್‌ಟಿ ಹೆಚ್‌ಓಡಿ ಡಾ. ಶ್ವೇತಾ ಅಜಿತ್ ಅವರ ಸೇವೆ ಹಾಗೂ ಪರಿಸರ ಜಾಗೃತಿಯನ್ನು ಪರಿಗಣಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ರೋಟರಿ, ಮಿಸ್ಟಿಹಿಲ್ಸ್, ವುಡ್ಸ್ ರೋಟರಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಶುಭ ಕೋರಿದರು. ನಿರ್ದೇಶಕರಾದ ಉಮಾ ಗೌರಿ, ಮಲ್ಲಿಗೆ ಪೈ, ಶಾಂತಿ ಕಾಮತ್, ಡಾ. ಶುಭ ರಾಜೇಶ್, ಬೊಳ್ಳು ಮೇದಪ್ಪ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ನಿರ್ಗಮಿತ ಕಾರ್ಯದರ್ಶಿ ಶಮ್ಮಿ ಪ್ರಭು ೨೦೨೧-೨೨ನೇ ಸಾಲಿನ ವರದಿ ಮಂಡಿಸಿದರು. ವಿಜಯಲಕ್ಷಿö್ಮ ಚೇತನ್ ಪ್ರಾರ್ಥಿಸಿ, ನಿರ್ಗಮಿತ ಅಧ್ಯಕ್ಷೆ ಶಫಾಲಿ ರೈ ಸ್ವಾಗತಿಸಿ, ಉಪಾಧ್ಯಕ್ಷೆ ನಮಿತ ರೈ ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.