ಚೆಟ್ಟಳ್ಳಿ, ಜು. ೨೪: ೭೫ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಗಾಂಧಿ ಯುವಕ ಸಂಘ ಕಂಡಕರೆ ವತಿಯಿಂದ ಮೊದಲನೇ ವರ್ಷದ ಜಿಲ್ಲಾಮಟ್ಟದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಗಸ್ಟ್ ೧೪ ಮತ್ತು ೧೫ ರಂದು ಕಂಡಕರೆಯ ಬ್ರೆöÊಟ್ ಸ್ಪೋರ್ಟ್ಸ್ ಕ್ಲಬ್ನ ಶಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ. ತಿಳಿಸಿದ್ದಾರೆ. ಆಗಸ್ಟ್ ೪ರೊಳಗೆ ನೋಂದಣಿ ಮಾಡಿದ ತಂಡಗಳಿಗೆ ಮಾತ್ರ ಅವಕಾಶ ನೀಡಲಿದ್ದು, ಪ್ರವೇಶ ರೂ. ೧೦೦೦ ನಿಗದಿಪಡಿಸಲಾಗಿದೆ.
ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ೯೭೩೧೬೮೭೫೯೮, ೯೫೯೧೬೯೨೪೬೭ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದೆAದು ತಿಳಿಸಿದ್ದಾರೆ.