ಮಡಿಕೇರಿ, ಜು. ೨೩ ಅರೆಭಾಷೆ ಪಾರಂಪರಿಕ ವಸ್ತುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಅರೆಭಾಷೆ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡುವಂತಾಗಬೇಕು ಎಂದು ಶಿಗ್ಗಾವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಸಲಹೆ ನೀಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಂದಿರುವ ‘ಅರೆಭಾಷೆ ಪಾರಂಪರಿಕ ವಸ್ತುಕೋಶ’ ಹೊತ್ತಿಗೆಯನ್ನು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಕುಕ್ಕೆ (ಬುಟ್ಟಿ)ಯಿಂದ ತೆಗೆಯುವ ಮೂಲಕ ಬಿಡುಗಡೆ ಮಾಡಿ ಮಾತನಾಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಂದಿರುವ ‘ಅರೆಭಾಷೆ ಪಾರಂಪರಿಕ ವಸ್ತುಕೋಶ’ ಹೊತ್ತಿಗೆಯನ್ನು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಕುಕ್ಕೆ (ಬುಟ್ಟಿ)ಯಿಂದ ತೆಗೆಯುವ ಮೂಲಕ ಬಿಡುಗಡೆ ಮಾಡಿ ಮಾತನಾಡಿದರು.

ಮುಂದಾಗಬೇಕು.

ಅರೆಭಾಷೆ ಪಾರಂಪರಿಕ ವಸ್ತುಕೋಶಗಳು ಜನಮನದಲ್ಲಿ ಪ್ರತಿಬಿಂಬಿಸುತ್ತವೆ ಎಂಬುದನ್ನು ಮರೆಯಬಾರದು. ಪಾರಂಪರಿಕ ವಸ್ತುಗಳು ಅರೆಭಾಷೆ ಸಂಸ್ಕೃತಿಯನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಹೆಚ್ಚಿನ ಜನರಿಗೆ ಪರಿಚಯಿಸುವಲ್ಲಿ ಮತ್ತಷ್ಟು ಪ್ರಯತ್ನಗಳು ನಡೆಯಬೇಕು. ಅರೆಭಾಷೆ ಪಾರಂಪರಿಕ ವಸ್ತುಗಳು ಸಾಂಸ್ಕೃತಿಕ ಮೌಲ್ಯವನ್ನು ಒಳಗೊಂಡಿದ್ದು, ಸಂಸ್ಕೃತಿಯ ಮಹತ್ವ ಸಾರುತ್ತದೆ. ಅರೆಭಾಷೆ ಪಾರಂಪರಿಕ ವಸ್ತುಕೋಶದ ಪರಿಕರಗಳಲ್ಲಿ ದೊರೆಯುವ ಜ್ಞಾನವನ್ನು ದಾಖಲಿಸಬೇಕು. ಇದರಿಂದ ಸಂಸ್ಕೃತಿ ಮತ್ತು ಇತಿಹಾಸವನ್ನು ಉಳಿಸಲು ಸಾಧ್ಯ ಎಂದರು.

‘ಅರೆಭಾಷೆ ಪಾರಂಪರಿಕ ವಸ್ತುಕೋಶವು ಅರೆಭಾಷೆ ಸಂಸ್ಕೃತಿಯ ಅಸ್ಮಿತೆಯನ್ನು ಸಾರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪರಿಚಯಿಸುವಲ್ಲಿ ಅರೆಭಾಷೆ ಪಾರಂಪರಿಕ ವಸ್ತುಕೋಶ ಸಹಕಾರಿಯಾಗುತ್ತದೆ.

ಅರೆಭಾಷೆ ಪಾರಂಪರಿಕ ವಸ್ತುಗಳು ಮರೆಯಾಗುತ್ತಿರುವ

(ಮೊದಲ ಪುಟದಿಂದ) ಸಂದರ್ಭದಲ್ಲಿ ಅರೆಭಾಷೆ ಅಕಾಡೆಮಿಯು ಸಾರ್ಥಕ ಕೆಲಸ ಮಾಡುತ್ತದೆ. ಹಬ್ಬ, ಜಾತ್ರೆ, ಮೆರವಣಿಗೆ ಮಾಡದೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವುದು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಬೆಳೆಸುವಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲ್ಲಿ ಸಂಶೋಧನಾ ಕೇಂದ್ರ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬAಧಿಸಿದAತೆ ಮತ್ತಷ್ಟು ಚಟುವಟಿಕೆಗಳು ನಡೆಯಲಿವೆ ಎಂದು ಹೇಳಿದರು.

ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಂದಿರುವ ಪಾರಂಪರಿಕ ವಸ್ತುಕೋಶ ಸೇರಿದಂತೆ ಹಲವು ಪುಸ್ತಕಗಳನ್ನು ಕೊಂಡು ಓದುವಂತಾಗಬೇಕು.

ಹಲವು ಸವಾಲುಗಳ ನಡುವೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಅರೆಭಾಷೆಯಲ್ಲಿ ಕತೆ, ಕವನ, ಲೇಖನಗಳನ್ನು ಬರೆಯಬೇಕು ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿ ಕಾರ್ಯ ಚಟುವಟಿಕೆಗಳಲ್ಲಿ ಪ್ರಮುಖವಾಗಿ ಪುಸ್ತಕ ಪ್ರಕಟಣೆಯೂ ಒಂದಾಗಿದೆ. ಆ ನಿಟ್ಟಿನಲ್ಲಿ ಅಕಾಡೆಮಿಯಿಂದ ಹಲವು ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದರು.

ಹAಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಅವರು ಮಾತನಾಡಿ ಅರೆಭಾಷೆ ಬೆಳವಣಿಗೆಗೆ ಅಕಾಡೆಮಿಯಿಂದ ಪ್ರಕಟಿಸಲಾಗಿರುವ ಕೃತಿಗಳು ಸಹಕಾರಿಯಾಗಿವೆ. ಭಾಷೆ ಬೆಳೆದರೆ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಯಲು ಸಾಧ್ಯ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಂದಿರುವ ಅರೆಭಾಷೆ ಪಾರಂಪರಿಕ ವಸ್ತುಕೋಶ, ಕುಕ್ಕೇಟಿ ಜಯಪ್ರಕಾಶ್ ಅವರು ಬರೆದಿರುವ ಸಾಹೇಬ್ರು ಬಂದವೇ, ದೇವಜನ ಗೀತಾ ಮೋಂಟಡ್ಕ ಅವರು ಬರೆದಿರುವ ಕಿರಗೂರಿನ ಗಯ್ಯಾಳಿಗ, ಕುಲ್ಕುಂದ ಭವ್ಯಶ್ರೀ ಅವರು ಬರೆದಿರುವ ಯಕ್ಷ ಜೊಂಪೆ, ಕುಯಿಂತೋಡು ದಾಮೋದರ ಅವರು ಬರೆದಿರುವ ನೆಂಪುನ ರ‍್ತೆ, ಪಿ.ಜಿ.ಅಂಬೆಕಲ್ ಅವರು ಬರೆದಿರುವ ಗೂಡೆ ಬೇಕಾಗುಟ್ಟು ಹಾಗೂ ಅಡ್ತಲೆ ಭವಾನಿಶಂಕರ ಅವರು ಬರೆದಿರುವ ಕತೆಗಳ ಅಟ್ಟುಳಿ ಪುಸ್ತಕಗಳ ಕುರಿತು ಮಾತನಾಡಿದರು.

ಪ್ರಾಸ್ತಾವಿಕವಾಗಿ ಡಾ. ಪುರುಷೋತ್ತಮ ಕರಂಗಲ್ಲು, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪೆರಾಜೆ ಗೌಡ ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಅವರು ಮಾತನಾಡಿದರು.

ಕುಕ್ಕೇಟಿ ಜಯಪ್ರಕಾಶ್, ದೇವಜನ ಗೀತಾ ಮೋಂಟಡ್ಕ, ಕುಯಿಂತೋಡು ದಾಮೋದರ, ಪಿ.ಜಿ.ಅಂಬೆಕಲ್, ಅಡ್ತಲೆ ಭವಾನಿಶಂಕರ, ರಿಜಿಸ್ಟಾçರ್ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ಕೂಡಕಂಡಿ ದಯಾನಂದ, ಕುಸುಮಾಧರ ಎ.ಟಿ. ಪುರುಷೋತ್ತಮ ಕಿರ್ಲಾಯ, ಕಿರಣ್ ಕುಂಬಳಚೇರಿ, ಇತರರು ಇದ್ದರು.

ಸದಸ್ಯ ಜಯಪ್ರಕಾಶ ಮೊಂಟಡ್ಕ ಸ್ವಾಗತಿಸಿದರು, ಎ.ಟಿ. ಕುಸುಮಾಧರ ನಿರೂಪಿಸಿದರು. ಕೆ.ಆರ್. ಗೋಪಾಲಕೃಷ್ಣ ಆಶಯ ಗೀತೆ ಹಾಡಿದರು. ಕಿರಣ್ ಕುಂಬಳಚೇರಿ ವಂದಿಸಿದರು.