ಮೈಸೂರು, ಜು. ೨೨: ಕಳೆದ ವಾರ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ರೋಲರ್ ಸ್ಕೇಟರ್ ಚಾಂಪಿಯನ್ ಶಿಪ್ ೨೦೨೧-೨೨ ಕ್ರೀಡಾಕೂಟದಲ್ಲಿ ಕೊಡಗು ಮೂಲದ ಸ್ಕೇಟಿಂಗ್ ಪಟು ರಿಯಾ ಅಚ್ಚಯ್ಯ ಮೂರು ಚಿನ್ನದ ಪದಕ ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಗೋಣಿಕೊಪ್ಪ ಸಮೀಪದ ಅತ್ತೂರಿನ ಕಾಡ್ಯಮಾಡ ಎನ್ ಅಚ್ಚಯ್ಯ ಮತ್ತು ಪ್ರಿಯಾ ಅಚ್ಚಯ್ಯ ಅವರ ಪುತ್ರಿಯಾಗಿದ್ದು, ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.