ಗುಡ್ಡೆಹೊಸೂರು: ಇಲ್ಲಿನ ಬಿ.ಜೆ.ಪಿ. ಶಕ್ತಿ ಕೇಂದ್ರದ ಸಭೆ ಸಮುದಾಯ ಭವನದಲ್ಲಿ ನಡೆಯಿತು. ಶಕ್ತಿ ಕೇಂದ್ರದ ಪ್ರಮುಖ ಕುಡೆಕ್ಕಲ್ ನಿತ್ಯಾನಂದ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ಸಂದರ್ಭ ಸಹಪ್ರಮುಖರಾದ ಪ್ರವೀಣ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಷದ ಪ್ರಭಾರಿಯಾಗಿರುವ ಬಿ.ಬಿ. ಭಾರತೀಶ್ ಅವರು ಹಾಜರಿದ್ದು, ಪಕ್ಷ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು.

ಅಲ್ಲದೆ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ ಬೂತ್ ಅಧ್ಯಕ್ಷರಿಗೆ ಮತ್ತು ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಪುಷ್ಪ, ಓ.ಬಿ.ಸಿ. ಮೋರ್ಚಾದ ಖಜಾಂಚಿ ಅಭಿಷೇಕ್, ಸದಸ್ಯ ಅಂಬಾಡಿ ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಸದಸ್ಯರಾದ ಪ್ರದೀಪ್, ಬೂತ್ ಅಧ್ಯಕ್ಷರುಗಳು ಮತ್ತು ಬಿ.ಜೆ.ಪಿ ಎಸ್ಟಿ ಮೋರ್ಚಾದ ರಾಜ್ಯ ಸದಸ್ಯ ಬಿ.ಕೆ. ಮೋಹನ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ವಿವಿಧ ಮೋರ್ಚಾದ ಸದಸ್ಯರುಗಳು ಹಾಜರಿದ್ದರು.