, ಜು. ೨೨: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಕೃಷಿ ಜಮೀನಿನಲ್ಲಿ ಇಲಾಖೆಯ ವತಿಯಿಂದ ವರ್ಷಂಪ್ರತಿಯAತೆ ಈ ಬಾರಿಯು ಭತ್ತದ ನಾಟಿ ಮಾಡಲು ಸಸಿಮಡಿಗಳ ಸಿದ್ಧತೆ ಮತ್ತು ನಾಟಿ ಭೂಮಿ ಉಳುಮೆ ಕೆಲಸ ಸಾಗುತ್ತಿದೆ.

ಕೃಷಿ ಇಲಾಖೆಯ ೨೦ ಎಕರೆಗಳಷ್ಟು ಪ್ರದೇಶದಲ್ಲಿ ಬೀಜೋತ್ಪ್ಪಾದನೆಗೆ ಅನುಕೂಲವಾಗುವ ಭತ್ತದ ತಳಿಗಳ ನಾಟಿಯನ್ನು ಮಾಡಲಾಗುತ್ತಿದೆ. ಈ ಸಾಲಿನಲ್ಲಿ ಬಾಂಗ್ಲಾರೈಸ್ (ಬಿ ಆರ್) ಭತ್ತದ ತಳಿಯ ಬೀಜವನ್ನು ಸಸಿ ಮಡಿಗೆ ಬಿತ್ತನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಾಟಿ ಕಾರ್ಯಕ್ಕೆ ಭೂಮಿಯ ಸಿದ್ಧತೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಬೋಪಯ್ಯ ತಿಳಿಸಿದ್ದಾರೆ.