ಮುಳ್ಳೂರು, ಜು. ೨೨: ವಾರದ ಹಿಂದೆ ಸುರಿಯುತ್ತಿದ್ದ ಮಳೆಗೆ ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೃಷಿಕರು ತತ್ತರಿಸಿದ್ದ ಹಿನ್ನೆಲೆ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆ ಇದೀಗ ಮತ್ತೆ ಚುರುಕು ಪಡೆದುಕೊಂಡಿದೆ. ವಾರದ ಹಿಂದೆ ಸುರಿದ ಭಾರೀ ಮಳೆಗೆ ಕಾಫಿ, ಕಾಳುಮೆಣಸು, ಏಲಕ್ಕಿ, ಶುಂಠಿ ನೆಲಕಚ್ಚಿತ್ತು. ಇದರಿಂದ ಹೋಬಳಿ ಭಾಗದ ಬೆಳೆಗಾರರು ಆತಂಕ ಎದುರಿಸುತ್ತಿದ್ದರು. ಕೆಲವು ರೈತರು ಗದ್ದೆಯಲ್ಲಿ ಬಿತ್ತನೆ ಮಾಡಿದ್ದ ಭತ್ತದ ಮೊಳಕೆ ಮೂಡುತ್ತಿದ್ದ ಭತ್ತದ ಸಸಿ ಮಡಿ ಮಳೆಗೆ ಕೊಚ್ಚಿ ಹೋಗಿತ್ತು.
ಕಳೆದ ೪ ದಿನಗಳಿಂದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಇರುವುದ ರಿಂದ ರೈತರು ಗದ್ದೆಗಳಲ್ಲಿ ನಾಟಿ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೋಬಳಿ ವ್ಯಾಪ್ತಿಯ ಕ್ಯಾತೆ, ಬೆಂಬಳೂರು, ಶಾಂತಪುರ ಮುಂತಾದ ಗ್ರಾಮಗಳಲ್ಲಿ ರೈತರು ಕಳೆದ ೪ ದಿನಗಳಿಂದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಇರುವುದ ರಿಂದ ರೈತರು ಗದ್ದೆಗಳಲ್ಲಿ ನಾಟಿ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೋಬಳಿ ವ್ಯಾಪ್ತಿಯ ಕ್ಯಾತೆ, ಬೆಂಬಳೂರು, ಶಾಂತಪುರ ಮುಂತಾದ ಗ್ರಾಮಗಳಲ್ಲಿ ರೈತರು