ಮಡಿಕೇರಿ, ಜು. ೨೨: ಕರಡ ಗ್ರಾಮದ ಚಡಗರ ಹರೀಶ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ವ್ಯಕ್ತಿಯ ಸಂಬAಧಿಕರಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.
ತೋಟದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೂಲತಃ ಕೇರಳ ನಿವಾಸಿ ಚಾಕೋ ಎಂಬಾತ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ವಿಶ್ರಾಂತಿ ಪಡೆಯುತ್ತಿದ್ದರು. ತಾ. ೨೧ ರಂದು ತೋಟದ ಮಾಲೀಕ ಆರೋಗ್ಯ ವಿಚಾರಿಸಲು ಎಂದು ಲೈನ್‌ಮನೆಗೆ ತೆರಳಿದಾಗ ಕಾರ್ಮಿಕ ಮೃತಪಟ್ಟಿರುವುದು ತಿಳಿದು ಬಂದಿದೆ. ಬಳಿಕ ಈ ಸಂಬAಧ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಮೃತ ವ್ಯಕ್ತಿ ೫.೫ ಅಡಿ ಎತ್ತರ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತರ ಕುಟುಂಬಸ್ಥರು ಇದ್ದಲ್ಲಿ ಸಂಪರ್ಕ ಸಂಖ್ಯೆ ೯೪೮೦೮೦೪೯೫೬, ೦೮೨೭೪ ೨೫೭೪೬೭ ಅನ್ನು ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.