ಸಂಪಾಜೆ, ಜು. ೨೨: ಸಂಪಾಜೆ ಲಯನ್ಸ್ ಕ್ಲಬ್‌ನ ಹೊಸ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಕಾರ್ಯಕ್ರಮವು ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ನಡೆಯಿತು. ಲಯನ್ಸ್ ಜಿಲ್ಲಾ ೨ನೇ ರಾಜ್ಯಪಾಲೆ ಭಾರತಿ ಬಿ.ಎಂ. ಪದಗ್ರಹಣ ಅಧಿಕಾರಿಯಾಗಿ, ನೂತನ ಅಧ್ಯಕ್ಷೆ ನಳಿನಿ ಕಿಶೋರ್ ಪಿ., ಕಾರ್ಯ ದರ್ಶಿ ಅಮೃತಾ ಅಪ್ಪಣ್ಣ, ಕೋಶಾಧಿ ಕಾರಿ ಗಿರೀಶ್ ಕೆ. ಅವರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ನಿಕಟಪೂರ್ವ ಅಧ್ಯಕೆÀ್ಷ ಟೀನಾ ಚರಣ್ ಸ್ವಾಗತಿಸಿದರು. ಕಾರ್ಯದರ್ಶಿ ಅಮೃತಾ ಅಪಣ್ಣ ವಂದಿಸಿದರು. ಧರ್ಮಾವತಿ ಕಿಶೋರ್ ನಿರೂಪಿಸಿದರು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕೆÀ್ಷ ಸಂದ್ಯಾ ಸಚಿತ್ ರೈ, ವಲಯಾಧ್ಯಕ್ಷ ಗಂಗಾಧರ ರೈ ಉಪಸ್ಥಿತರಿದ್ದರು. ಸುಳ್ಯ, ಪಂಜ, ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ ಕ್ಲಬ್‌ಗಳ ಸದಸ್ಯರು ಆಗಮಿಸಿದ್ದರು. ಈ ಸಂದರ್ಭ ಕ್ಲಬ್‌ನ ನೂತನ ಕಾರ್ಯದರ್ಶಿಯವರಿಂದ ಚೆಂಬು ಹೈಸ್ಕೂಲಿನ ಪ್ರತಿಭಾವಂತ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಧನ ರೂ. ೫೦೦೦ರಂತೆ ವಿತರಣೆ ಮಾಡಲಾಯಿತು.