ಮಡಿಕೇರಿ, ಜು. ೨೨: ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಯಡಿಯಲ್ಲಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ, ರಬ್ಬರ್ ಹೊರತುಪಡಿಸಿ) ಹನಿ ನೀರಾವರಿ ಅಳವಡಿಕೆಗಾಗಿ ಗರಿಷ್ಠ ೫ ಹೇ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ೨ ಹೆಕ್ಟೇರ್ ಪ್ರದೇಶದವರೆಗೆ ಶೇ. ೯೦ರ ಸಹಾಯಧನ ಮತ್ತು ಇತರೆ ರೈತರಿಗೆ ಶೇ. ೭೫ ರ ಸಹಾಯಧನ ದೊರೆಯಲಿದೆ. ಹಾಗೂ ೨ ಹೆಕ್ಟೇರ್ ರಿಂದ ೫ ಹೆಕ್ಟೇರ್ ಪ್ರದೇಶದವರೆಗೆ ಶೇ. ೪೫ರ ಸಹಾಯಧನ ನೀಡಲಾಗುತ್ತದೆ.
ರಾಷ್ಟಿçÃಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿಯಲ್ಲಿ ಹಸಿರು ಮನೆ (ಪಾಲಿ ಹೌಸ್) (ಓಚಿಣuಡಿಚಿಟಟಥಿ ಗಿeಟಿಣiಟಚಿಣeಜ ಖಿubuಟಚಿಡಿ Sಣಡಿuಛಿಣuಡಿe) ಯಲ್ಲಿ ವಿವಿಧ ಬಗೆಯ ಪುಷ್ಪ, ಹಣ್ಣಿನ, ಅಧಿಕ ಮೌಲ್ಯ ತರಕಾರಿ ಬೆಳೆಗಳನ್ನು ಸಂರಕ್ಷಿತ ವಾತಾವರಣದಲ್ಲಿ ಬೆಳೆಸಲು ಉತ್ತೇಜನ ನೀಡುವ ಉದ್ದೇಶದಿಂದ ಹೊಸದಾಗಿ ಹಸಿರು ಮನೆ (ಓಚಿಣuಡಿಚಿಟಟಥಿ ಗಿeಟಿಣiಟಚಿಣeಜ ಖಿubuಟಚಿಡಿ Sಣಡಿuಛಿಣuಡಿe) ನಿರ್ಮಾಣ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ಕನಿಷ್ಟ ೫೬೦ ಚ.ಮೀ. ನಿಂದ ಗರಿಷ್ಠ ೪ ಸಾವಿರ ಚ.ಮೀ ವರೆಗೆ ಶೇ.೫೦ರ ಇಲಾಖಾ ನಿಗದಿಪಡಿಸಿದ ದರಕ್ಕೆ ಅನುಗುಣವಾಗಿ ನೀಡಲಾಗುವುದು. ಹಾಗೂ ಪಾಲಿ ಹೌಸ್‌ನಲ್ಲಿ ಅಧಿಕ ಮೌಲ್ಯದ ಬೆಳೆಯನ್ನು ಬೆಳೆಯಲು ಶೇ. ೫೦ ರ ಸಹಾಯಧನದಲ್ಲಿ ರೂ. ೧.೪೦ ಗಳನ್ನು ಪ್ರತಿ ಎಕರೆಗೆ ನೀಡಲಾಗುತ್ತದೆ.
ರಾಷ್ಟಿçÃಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿ ಅಣಬೆ ಬೇಸಾಯವನ್ನು ಖಾಸಗಿ ವಲಯದಲ್ಲಿ ಉತ್ಪಾದನೆ ಮಾಡಲು ಒಟ್ಟು ಘಟಕ ವೆಚ್ಚ ರೂ. ೨೦ ಲಕ್ಷಗಳಲ್ಲಿ ಶೇ.೪೦ರ ಸಹಾಯಧನ ಗರಿಷ್ಠ ೮ ಲಕ್ಷದವರೆಗೆ ನೀಡಲಾಗುವುದು. ಅಣಬೆ ಉತ್ಪಾದನಾ ಘಟಕ ಸ್ಥಾಪಿಸಲು ಅಗತ್ಯವಿರುವ ಮೂಲಭೂತ ಸೌಕಾರ್ಯಗಳಾದ ಕಟ್ಟಡ ನಿರ್ಮಾಣ, ಮೂಲ ಸೌಕರ್ಯ ನಿರ್ಮಾಣ ಹಾಗೂ ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡಲಾಗುತ್ತದೆ.
ತೋಟಗಾರಿಕೆಯಲ್ಲಿ ಮಾನವ ಶಕ್ತಿ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಯಾಂತ್ರೀಕರಣವನ್ನು ಉತ್ತೇಜಿಸಲು ೨೦ ಪಿಟಿಒ ಎಚ್‌ಪಿ ಅಶ್ವ ಶಕ್ತಿಗಿಂತ ಕಡಿಮೆ ಸಾಮರ್ಥ್ಯವಿರುವ ಟ್ರಾö್ಯಕ್ಟರ್ ಮತ್ತು ೮ ಎಚ್‌ಪಿ ಅಶ್ವ ಶಕ್ತಿಗಿಂತ ಕಡಿಮೆ ಇರುವ ಪವರ್ ಟಿಲ್ಲರ್ ಖರೀದಿಗೆ ಶೇ.೨೫/ ೩೫ ರಂತೆ ಸಹಾಯಧನ ನೀಡಲಾಗುತ್ತದೆ.
ರಾಷ್ಟಿçÃಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿ ಪ್ರಾಥಮಿಕ ಸಂಸ್ಕರಣ ಘಟಕ ಸ್ಥಾಪಿಸಲು ಒಟ್ಟು ಯೋಜನಾ ವೆಚ್ಚ ಶೇ.೪೦ ರಂತೆ ರೂ. ೧೦ ಲಕ್ಷಗಳವರೆಗೆ ಸಹಾಯಧನ ದೊರೆಯಲಿದೆ. ಮುಖ್ಯವಾಗಿ ಅಡಿಕೆ, ಕೋಕೋ, ಕಾಳುಮೆಣಸು, ಏಲಕ್ಕಿ, ಕೋಕಂ, ಗೇರು, ಶುಂಠಿ, ಅರಶಿಣ ಮತ್ತಿತರ ಪ್ರಾಥಮಿಕ ಸಂಸ್ಕರಣೆ ಮಾಡಲು ಸಹಾಯಧನ ನೀಡಲಾಗುವುದು. ನಗರ ಹಾಗೂ ಪಟ್ಟಣಗಳಲ್ಲಿ ಹಣ್ಣು ತರಕಾರಿಗಳನ್ನು ತಳ್ಳುವ ಗಾಡಿಯ ಮುಖಾಂತರ ಮಾರಾಟ ಮಾಡಲು ಶೇ.೫೦ರ ಸಹಾಯಧನ ರೂ. ೧೫ ಸಾವಿರ ಕಲ್ಪಿಸಲಾಗುತ್ತದೆ.
ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಈಗಾಗಲೇ ಪಾಲಿಹೌಸ್ ನಿರ್ಮಾಣ ಮಾಡಿದ ಕನಿಷ್ಟ ೩ ವರ್ಷ ಹಳೆದಾಗಿರುವ ಹಸಿರು ಮನೆಯಲ್ಲಿ ಶೀಥಿಲಗೊಂಡಿರುವ ಯುವಿ ಸ್ಟಬಿಲೈಸ್ಡ್ ಪಾಲಿ ಶೀಟ್ ಬದಲಾವಣೆಗೆ ಶೇ. ೨೫ ರಂತೆ ಪ್ರತಿ ಚ.ಮೀ.ಗೆ ಸಹಾಯಧನವನ್ನು ಗರಿಷ್ಠ ೧ ಹೆಕ್ಟೇರ್ ಪ್ರದೇಶಕ್ಕೆ ರೂ. ೧.೫೦ ಲಕ್ಷಗಳಿಗೆ ನೀಡಲಾಗುವುದು. ಹಸಿರು ಮನೆಯಲ್ಲಿ ಅನುತ್ಪಾದಕ ಅನುಪಯುಕ್ತ ಗಿಡಗಳನ್ನು ತೆಗೆದು ಹೊಸದಾಗಿ ಗಿಡಗಳನ್ನು ನೆಡಲು ಶೇ.೨೫ ರ ಸಹಾಯಧನ ನೀಡಲಾಗುತ್ತದೆ.
ಕೇಂದ್ರ ಪುರಸ್ಕೃತ ರಾಷ್ಟಿçÃಯ ಖಾದ್ಯ ತೈಲಾ ಅಭಿಯಾನದಲ್ಲಿ ತಾಳೆ ಬೆಳೆಯನ್ನು ಇಲಾಖಾ ಪಾಲುದಾರಿಕೆ ಕಂಪೆನಿಯಾದ ರುಚಿ ಸೋಯಾ ಇಂಡ್ಸ್ ಸ್ಟಿçÃಸ್ಸ್ ರವರೊಂದಿಗೆ ಪಿಪಿಪಿ (PPP) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಳೆ ಹೊಸ ಪ್ರದೇಶ ವಿಸ್ತರಣೆಗೆ ರೂ. ೨೦ ಸಾವಿರ ಸಹಾಯಧನ ಹಾಗೂ ಮೊದಲ ನಾಲ್ಕು ವರ್ಷದ ಪಾಲನೆಗಾಗಿ ರೂ. ೫೫೦೦ ರಂತೆ ಪ್ರತಿ ಹೇಕ್ಟರ್‌ಗೆ ನೀಡಲಾಗುವುದು. ಇದರ ಜೊತೆಗೆ ತಾಳೆಯಲ್ಲಿ ಡಿಸೇಲ್ ಪಂಪ್ ಸೆಟ್ ಖರೀದಿಗೆ, ಕಟಾವು ಯಂತ್ರ ಖರೀದಿಗೆ, ಸಹಾಯಧನ ನೀಡಲಾಗುತ್ತದೆ.
ಆಸಕ್ತ ರೈತರು ನಿಗದಿತ ಅರ್ಜಿ ನಮೂನೆ, ಆರ್‌ಟಿಸಿ, ಆಧಾರ್ ಕಾರ್ಡ್ ಹಾಗೂ ಮತ್ತಿತರ ದಾಖಲಾತಿಗಳೊಂದಿಗೆ ಸಮೀಪದ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಯಲ್ಲಿ ಹೆಸರನ್ನು ಆಗಸ್ಟ್ ೧೫ ರೊಳಗೆ ನೋಂದಾಯಿಸಿಕೊಳ್ಳಲು ಕೋರಿದೆ. ಸಹಾಯಧನವನ್ನು ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಜೇಷ್ಠತಾ ಪಟ್ಟಿ ಆಧಾರದ ಮೇಲೆ ನೀಡಲಾಗುವುದು ಹಾಗೂ ಸರ್ಕಾರದ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.
ವಸತಿ ಮತ್ತು ನಿವೇಶನ ರಹಿತರಿಂದ
ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಾದ್ಯಂತ ವಾಸವಿರುವ ಜೇನುಕುರುಬ, ಯರವ, ಕುಡಿಯ, ಮಲೆಕುಡಿಯ ಹಾಗೂ ಕುರುಬ(ಕೊಡಗು ಜಿಲ್ಲೆ) ಜನಾಂಗದ ಪರಿಶಿಷ್ಟ ಪಂಗಡದ ವಸತಿ ರಹಿತ, ನಿವೇಶನ ರಹಿತರಿಗೆಲ್ಲರಿಗೂ ವಸತಿ, ನಿವೇಶನ ನೀಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ಧರಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆ, ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ, ಆರ್.ಡಿ. ಸಂಖ್ಯೆ ಹೊಂದಿರುವ ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ, ಚುನಾವಣಾ ಗುರುತಿನ ಚೀಟಿ ಜೆರಾಕ್ಸ್ ಪ್ರತಿ ಮತ್ತು ನಿವೇಶನ ಪತ್ರ/ ಹಕ್ಕುಪತ್ರ ಜೆರಾಕ್ಸ್ ಪ್ರತಿ (ವಸತಿಗಾಗಿ ಅರ್ಜಿ ಸಲ್ಲಿಸುವವರು) ದಾಖಲಾತಿಗಳೊಂದಿಗೆ ಸಲ್ಲಿಸಿದ ಎಲ್ಲರಿಗೂ ವಸತಿ, ನಿವೇಶನ ನೀಡಲು ಕ್ರಮವಹಿಸಲಾಗುವುದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪೊನ್ನಂಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ ತಿಳಿಸಿದ್ದಾರೆ.