ಚೆಯ್ಯಂಡಾಣೆ, ಜು ೨೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದು, ಈ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾಫಿ ಪಸಲಿಗೂ ಕೂಡ ಹೊಡೆತ ಉಂಟಾಗಿದ್ದು ಕಾಫಿಗೆ ಕೊಳೆ ರೋಗ ಬಾಧಿಸಿದೆ. ಈ ವರ್ಷದ ಕಾಫಿಗಳು ಗಿಡಗಳಿಂದ ಉದುರುತ್ತಿದ್ದು ರೈತರು ಕಂಗಾಲಾಗಿದ್ದಾರೆ.
ಚೇಲಾವರದ ಕುಟ್ಟನ ಕಾರ್ಯಪ್ಪ, ಹರೀಶ, ಸೀತಾರಾಮ್, ಪೂಳಂಡ ನಳಿಲಿ, ಕಳಿಯಟಂಡ ಮುತ್ತಪ್ಪ ಹಾಗೂ ಮುಂಡಿಯೋಳAಡ ಕುಟುಂಬಸ್ಥರ ತೋಟಗಳಿಗೆ ಕಾಡಾನೆ ನಿರಂತರ ದಾಳಿ ನಡೆಸಿ ಕಾಫಿ, ಅಡಿಕೆ, ಬಾಳೆ, ಒಳ್ಳೆಮೆಣಸು ಗಿಡಗಳನ್ನು ತುಳಿದು ನಾಶಪಡಿಸಿದ್ದು ಕೂಡಲೇ ಕಾಡಾನೆ ಕಾರ್ಯಾಚರಣೆ ಆರಂಭಿಸಿ ಕಾಡಾನೆಯನ್ನು ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ರಾತ್ರಿ ಮನೆಯಿಂದ ಹೊರಬರಲು ಭಯ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಹೆದರಿಕೆ ಇದೆ. ಕಾಡಾನೆಯನ್ನು ಕೂಡಲೇ ಕಾರ್ಯಾಚರಣೆ ನಡೆಸಿ ಹಿಡಿಯುವಂತೆ ಹಾಗೂ ಈ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾಫಿಗೆ ಕೊಳೆ ರೋಗದಿಂದ ನಷ್ಟ ಅನುಭವಿಸಿದ್ದೇವೆ ಕೂಡಲೇ ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥ ಕುಟ್ಟನ ಕಾರ್ಯಪ್ಪ ಒತ್ತಾಯಿಸಿದ್ದಾರೆ.