ಕುಶಾಲನಗರ, ಜು.೨೧: ಕುಶಾಲನಗರ ಸಮೀಪದ ಬಸನವನಹಳ್ಳಿ ಲ್ಯಾಂಪ್ಸ್ ಸಂಸ್ಥೆಯಲ್ಲಿ ೨೦೧೮-೧೯ರಲ್ಲಿ ನಡೆದಿದ್ದ ಹಣ ದುರುಪಯೋಗ ಸಂಬAಧ ಹಣ ಮರುಪಾವತಿಯಾಗುವುದರೊಂದಿಗೆ ಪ್ರಕರಣ ಅಂತ್ಯಕAಡಿದೆ.

೨೦೧೫-೨೦ರ ಅವಧಿಯಲ್ಲಿ ಲ್ಯಾಂಪ್ಸ್ ಅಧ್ಯಕ್ಷರಾಗಿದ್ದ ಎಸ್.ಎನ್. ರಾಜರಾವ್ ಸಂಘಕ್ಕೆ ರೂ. ೨೩.೮೬ ಲಕ್ಷ ದುರುಪಯೋಗ ಪಡಿಸಿದ ಮೊತ್ತವನ್ನು ಸಂಘಕ್ಕೆ ಮರುಪಾವತಿ ಮಾಡಿರುವುದಾಗಿ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ ಚಂದ್ರ ತಿಳಿಸಿದ್ದಾರೆ. ಹಿಂದಿನ ಆಡಳಿತ ಮಂಡಳಿಯಲ್ಲಿ ಕಿರು ಅರಣ್ಯ ಉತ್ಪನ್ನ ಮತ್ತು ವ್ಯಾಪಾರ ಮುಂಗಡ ಹೆಸರಿನಲ್ಲಿ ಎಸ್. ಎನ್. ರಾಜಾರಾವ್ ಚೆಕ್ ಮುಖಾಂತರ ಹಣ ನಗದೀಕರಿಸಿದ್ದು ಬೆಳಕಿಗೆ ಬಂದಿತ್ತು.

೨೦೨೦-೨೫ರ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಆಡಿಟ್ ವರದಿಯಲ್ಲಿ ದುರುಪಯೋಗವಾಗಿರುವ ಬಗ್ಗೆ ಬಹಿರಂಗಗೊAಡ ಹಿನ್ನೆಲೆಯಲ್ಲಿ ಈ ಸಾಲಿನ ಆಡಳಿತ ಮಂಡಳಿ ಹಿಂದಿನ ಅಧ್ಯಕ್ಷರ ಮೇಲೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ನಂತರ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಈ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದರು.

ಕಳೆದ ೨ ವರ್ಷಗಳಿಂದ ಕ್ಷೇತ್ರ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ಆಡಳಿತ ಮಂಡಳಿಯ ಶ್ರಮದಿಂದ ದುರುಪಯೋಗಗೊಂಡ ಭಾರಿ ಮೊತ್ತದ ಹಣ ಮತ್ತೆ ಸಂಘಕ್ಕೆ ದೊರಕಿರುವುದು ಸಂತಸದ ವಿಷಯ ಎಂದು ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಯಾವುದೇ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಉತ್ತಮ ಆಡಳಿತದೊಂದಿಗೆ ಅಕ್ರಮ ನಡೆಯದಂತೆ ಎಚ್ಚರವಹಿಸಬೇಕು ಎಂದು ಹೇಳಿದ್ದಾರೆ.