ಗೋಣಿಕೊಪ್ಪಲು, ಜು. ೨೧: ಕಳೆದ ಹಲವು ದಶಕಗಳಿಂದ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗೊಲ್ಲಿ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಕುಡಿಯುವ ನೀರು ಹಾಗೂ ರಸ್ತೆ ವ್ಯವಸ್ಥೆ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ಅಡ್ಡಿಪಡಿಸದಂತೆ ಸರ್ಕಾರಕ್ಕೆ ರಾಜ್ಯ ಉಚ್ಚನ್ಯಾಯಲಯ ಆದೇಶಿಸಿದೆ.

ಚನ್ನಂಗೊಲ್ಲಿ ಗ್ರಾಮಸ್ಥರ ಪರವಾಗಿ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಈ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಕಳೆದ ಹಲವು ದಶಕಗಳಿಂದ ಈ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯ ಜನರು ವಾಸಿಸುತ್ತಿದ್ದು, ರಾಜ್ಯ ಹೆದ್ದಾರಿಯ ಸಮೀಪವೇ ಈ ಪೈಸಾರಿ ಜಾಗವಿದೆ.

ಪೈಸಾರಿ ಜಾಗವು ದೇವರ ಕಾಡಿಗೆ ಸಂಬAಧಿಸಿದ ಬಗ್ಗೆ ಹಲವರು ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿ ದ್ದರು. ಅಂದಿನಿAದ ಇಲ್ಲಿಯತನಕ ಈ ಭಾಗದ ಜನರ ಓಡಾಟಕ್ಕೆ ಅವಶ್ಯವಿರುವ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕಾನೂನಿನ ಅಡ್ಡಿಪಡಿಸಲಾಗುತಿತ್ತು. ಗ್ರಾಮ ಪಂಚಾಯಿತಿ ಈ ಭಾಗಕ್ಕೆ ಅನುದಾನವನ್ನು ಮೀಸಲಿಟ್ಟಿದ್ದರೂ ಇದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಹಲವು ಮನವಿಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದರೂ ಪ್ರಯೋಜನ ವಾಗಿರಲಿಲ್ಲ.

ಚನ್ನಂಗೊಲ್ಲಿ ಪೈಸಾರಿಗೆ ತೆರಳಿದ ಹೈಕೋರ್ಟ್ನ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಈ ಬಗ್ಗೆ ವಸ್ತು ಸ್ಥಿತಿಯನ್ನು ಅವಲೋಕಿಸಿ ಅಲ್ಲಿನ ಗ್ರಾಮಸ್ಥರೊಂದಿಗೆ ಸುದೀರ್ಘವಾಗಿ ಚರ್ಚಿಸಿ ನ್ಯಾಯಾಲಯದ ಮೂಲಕ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ನ್ಯಾಯಾಲಯದಲ್ಲಿ ಖುದ್ದಾಗಿ ನ್ಯಾಯಾಧೀಶರ ಮುಂದೆ ಇಲ್ಲಿನ ವಸ್ತು ಸ್ಥಿತಿಯ ಬಗ್ಗೆ ವಾದ ಮಂಡಿಸಿದ್ದರು.

ನ್ಯಾಯಾಲಯವು ಈ ಬಗ್ಗೆ ಆದೇಶ ನೀಡಿ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳ ಲ್ಲೊಂದಾದ ಕುಡಿಯುವ ನೀರು ಹಾಗೂ ನಡೆದಾಡಲು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಆದೇಶ ನೀಡಿದೆ. ಇದರಿಂದ ಹಲವು ದಶಕಗಳಿಂದ ಸಮಸ್ಯೆ ಎದುರಿಸುತ್ತಿದ್ದ ಸಾವಿರಾರು ಜನರಿಗೆ ಹೈಕೋರ್ಟ್ನ ಆದೇಶದಿಂದ ನೆಮ್ಮದಿ ಸಿಕ್ಕಿದಂತಾಗಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ.

ಅಲ್ಲದೆ ಬಾಡಿಗೆ ವಾಹನಗಳು ಪೈಸಾರಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಜನಪ್ರತಿನಿಧಿಗಳು ಈ ಭಾಗಕ್ಕೆ ತೆರಳಿದಾಗ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸುತ್ತಿದ್ದರು. ಹಲವು ಬಾರಿ ಈ ಭಾಗದಲ್ಲಿ ಮತದಾನವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಸಮಸ್ಯೆಗೆ ಪರಿಹಾರ ಲಭಿಸಿದ್ದು ಜನಪ್ರತಿನಿಧಿಗಳು ಈ ಭಾಗದ ಮೂಲಭೂತ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಅನುದಾನವನ್ನು ಬಿಡುಗಡೆಗೊಳಿಸಬೇಕಾಗಿದೆ.

-ಹೆಚ್.ಕೆ.ಜಗದೀಶ್