ಮಡಿಕೇರಿ, ಜು. ೨೧: ಕೊಡಗಿನಲ್ಲಿ ನಡೆದ ಜನಾಂಗೀಯ ನಿಂದನೆ ಪ್ರಕರಣ ಮತ್ತು ಈ ನೆಪದಲ್ಲಿ ಮುಸ್ಲಿಂ ಸಮುದಾಯವನ್ನು ತೇಜೋವಧೆ ಮಾಡಿದ ಕೃತ್ಯಕ್ಕೆ ಸೂಕ್ತ ನ್ಯಾಯ ಒದಗಿಸುವಂತೆ ಕೋರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿದ ಕೊಡಗಿನ ಅಲ್ಪಸಂಖ್ಯಾತ ಪ್ರಮುಖರ ನಿಯೋಗವೊಂದು, ಪ್ರಕರಣದಲ್ಲಿ ಇದೀಗ ಬಂಧಿತನಾಗಿರುವ ಆರೋಪಿಯನ್ನು ಗಡಿಪಾರು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕರ್ನಾಟಕ ಪೊಲೀಸ್ ಪ್ರಧಾನ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತು ರಾಜ್ಯ ಪೊಲೀಸ್ ಅಪರಾಧ ವಿಭಾಗದ ಸಹಾಯಕ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೀಮಾ ಲಾಟ್ಕರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಈ ನಿಯೋಗ, ಸಾಮಾಜಿಕ ಜಾಲತಾಣವಾದ ಇನ್ಸಾ÷್ಟಗ್ರಾಮ್‌ನಲ್ಲಿ ಬಂದ ಪೋಸ್ಟಿಗೆ ಸಂಬAಧಿಸಿದAತೆ ಆರೋಪಿಯು ನಕಲಿ ಖಾತೆಯನ್ನು ಸೃಷ್ಟಿಸಿ ಕಳೆದ ೨೦ ದಿನಗಳ ಹಿಂದೆ ಜನಾಂಗೀಯ ನಿಂದನೆ ಮಾಡಿದ ಪ್ರಕರಣ ಇಡೀ ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿತ್ತು. ಈ ವ್ಯಕ್ತಿ ಕೊಡವರ ಆರಾಧ್ಯ ದೇವತೆ ಕಾವೇರಿ ಮಾತೆಯನ್ನು ಮತ್ತು ಕೊಡವ ಮಹಿಳೆಯರನ್ನು ತೀರಾ ಅವಮಾನಿಸುವ ರೀತಿಯಲ್ಲಿ ನಿಂದಿಸುವ ಮೂಲಕ ಜನಾಂಗೀಯ ಸಂಘರ್ಷಕ್ಕೆ ಸಂಚು ರೂಪಿಸಿದ್ದ. ಈ ವ್ಯವಸ್ಥಿತ ಪಿತೂರಿಯ ಹಿಂದೆ ಪ್ರಭಾವಿ ಜಾಲವೊಂದು ಕಾರ್ಯನಿರ್ವಹಿಸಿರುವ ಶಂಕೆಯಿದ್ದು, ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿತು.
ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಇದನ್ನು ಮುಸ್ಲಿಂ ಜನಾಂಗದ ವ್ಯಕ್ತಿಗಳೇ ಮಾಡಿರುತ್ತಾರೆ ಎಂಬ ನಿರ್ಧಾರಕ್ಕೆ ಬಂದ ಕೊಡಗಿನ ಬಹುತೇಕ ಜನಾಂಗೀಯ ಸಂಘಟನೆಗಳು, ಕೆಲವು ಸಂಘ-ಸAಸ್ಥೆಗಳು ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿ ವ್ಯಾಪಕವಾಗಿ ತೇಜೋವಧೆ ಮಾಡಿರುತ್ತಾರೆ. ಅಲ್ಲದೆ ಕೆಲವು ಸಂಘ-ಸAಸ್ಥೆಗಳು ಕೊಡಗಿನ ಮುಸ್ಲಿಮರೇ ಈ ಕೃತ್ಯ ಎಸಗಿರುತ್ತಾರೆ ಎಂದು ಕಲ್ಪಿಸಿಕೊಂಡು ಪತ್ರಿಕಾ ಹೇಳಿಕೆ ಮೂಲಕವೂ ತೀವ್ರ ಅಪಪ್ರಚಾರ ಮಾಡಿ ಕೊಡಗಿನಲ್ಲಿ ಕೋಮುಗಲಭೆ ಸೃಷ್ಟಿಸಲು ತೀವ್ರ ಪ್ರಯತ್ನ ನಡೆಸಿದ್ದರು ಎಂದು ನಿಯೋಗದಲ್ಲಿದ್ದ ಪ್ರಮುಖರು ಡಿಜಿಪಿ ಅವರ ಗಮನ ಸೆಳೆದರು.
ಜನಾಂಗೀಯ ದ್ವೇಷ ಹುಟ್ಟು ಹಾಕುವ ಆರೋಪಿಯ ಸಂಚು ಬಹಿರಂಗವಾಗುತ್ತಿದ್ದAತೆ ಈ ಕೃತ್ಯಕ್ಕೆ ಯಾವುದೇ ಸಂಬAಧವಿಲ್ಲದ ಅಮಾಯಕ ಯುವಕನ ಚಿತ್ರವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಈತನೇ ಈ ಕೃತ್ಯವೆಸಗಿರುವುದಾಗಿ ವ್ಯಾಪಕವಾದ ಪ್ರಚಾರ ಮಾಡಿರುತ್ತಾರೆ. ಇದರಿಂದ ಈ ಯುವಕನಿಗೆ ಮತ್ತು ಕುಟುಂಬದವರಿಗೆ ತೀವ್ರ ರೀತಿಯ ಮಾನಸಿಕ ಹಿಂಸೆಯಾಗಿದೆ. ಯುವಕ ಮೊಹಮ್ಮದ್ ಅಸ್ಫಾಕ್‌ನ ತಂದೆ ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಪ್ರಕರಣ ದಾಖಲಾಗಿರುವುದಿಲ್ಲ ಎಂದು ನಿಯೋಗ ಡಿಜಿಪಿ ಅವರಲ್ಲಿ ದೂರಿತು.
ಕೊಡವರ ವಿರುದ್ಧ ಜನಾಂಗೀಯ ನಿಂದನೆ ಮಾಡಿ ಅದನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿರುವ ಹಿಂದೆ ವ್ಯವಸ್ಥಿತವಾದ ಷಡ್ಯಂತರವಿದೆ. ಕೋಮುಗಲಭೆ ಸೃಷ್ಟಿಸಲು ಮಾಡಲಾಗಿರುವ ಈ ಸಂಚಿನಲ್ಲಿ ಸಮಾಜಘಾತುಕ ಮತ್ತು ವಿದ್ವಾಂಸಕ ಶಕ್ತಿಗಳ ಕೈವಾಡವಿದೆ. ಜನಾಂಗೀಯ ನಿಂದನೆಯನ್ನು ನೆಪವಾಗಿಸಿಕೊಂಡು ತೀವ್ರ ರೀತಿಯ ಪ್ರತಿಭಟನೆಯ ಮೂಲಕ ಗಲಭೆ ನಡೆಸುವ ಹುನ್ನಾರ ನಡೆದಿತ್ತು. ಆದರೆ ಇದೀಗ ಆರೋಪಿ ಮುಸ್ಲಿಂ ಅಲ್ಲ ಎಂದು ಬಹಿರಂಗಗೊAಡ ಕಾರಣ ಎಲ್ಲಾ ಪ್ರತಿಭಟನೆಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಈ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದು ಪ್ರಮುಖರು ಹೇಳಿದರು.
ಆರೋಪಿಯು ರಾಜಕೀಯ ಪ್ರಭಾವವಿರುವ ಕೌಟುಂಬಿಕ ಹಿನ್ನೆಲೆಯವನಾದ್ದರಿಂದ ಮುಂದೆ ಸಾಕ್ಷö್ಯ ನಾಶಪಡಿಸುವ ಎಲ್ಲಾ ಸಾಧ್ಯತೆಗಳಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಮನವಿ ಸ್ವೀಕರಿಸಿದ ಡಿಜಿಪಿ ಪ್ರವೀಣ್ ಸೂದ್ ಮಾತನಾಡಿ, ಈ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಿ ಸಂಬAಧಿಸಿದವರಿಗೆ ಸೂಕ್ತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಪಿ.ಎ. ಹನೀಫ್, ಐಮಂಗಲ (ಕೊಮ್ಮೆತೋಡು) ಮುಸ್ಲಿಂ ಜಮಾಅತ್‌ನ ಮಾಜಿ ಅಧ್ಯಕ್ಷ ಕೋಳುಮಂಡ ರಫೀಕ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಸದಸ್ಯ ಕೆ.ಎಂ. ಭಾವ ಮೊದಲಾದವರು ಇದ್ದರು.