ಮಡಿಕೇರಿ, ಜು. ೧೯: ಹಾಸನ ಜಿಲ್ಲೆಯಲ್ಲಿಯ ಅಡಿಷನಲ್ ಎಸ್‌ಪಿ (ಎ.ಎಸ್.ಪಿ)ಯಾಗಿ ಕೊಡಗಿನವರಾದ ಮಾದಪಂಡ ಕೆ. ತಮ್ಮಯ್ಯ ಅವರು ನಿಯುಕ್ತಿಗೊಂಡಿದ್ದಾರೆ.

ಮೂಲತಃ ಕುಶಾಲನಗರ ರಂಗಸಮುದ್ರದವರಾದ ಇವರು ಬೆಂಗಳೂರಿನಲ್ಲಿ ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಹಾಸನದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದು, ತಾ. ೧೫ ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ತಮ್ಮಯ್ಯ ಅವರು ಈ ಹಿಂದೆ ಮಡಿಕೇರಿಯಲ್ಲಿ ಸಾವಿಗೀಡಾದ ಡಿವೈಎಸ್‌ಪಿ ಎಂ.ಕೆ. ಗಣಪತಿ ಅವರ ಸಹೋದರರಾಗಿದ್ದಾರೆ.