ಮಡಿಕೇರಿ, ಜು. ೨೦: ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ವಿವಿಧೆಡೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ತಾ. ೨೫ ರಂದು ಸೋಮವಾರಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣ, ತಾ. ೨೬ ರಂದು ಕುಶಾಲನಗರ ಪ್ರವಾಸಿ ಮಂದಿರ, ತಾ. ೨೭ ರಂದು ವೀರಾಜಪೇಟೆ ತಹಶೀಲ್ದಾರ್ ಕಚೇರಿ, ತಾ. ೨೮ ರಂದು ಪೊನ್ನಂಪೇಟೆ ಪ್ರವಾಸಿ ಮಂದಿರ, ತಾ. ೨೯ ರಂದು ಮಡಿಕೇರಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಯಾ ದಿನ ಬೆಳಿಗ್ಗೆ ೧೧ ಗಂಟೆಯಿAದ ೧ ಗಂಟೆಯ ತನಕ ಆಲಿಸಲಿದ್ದಾರೆ.

ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿ ಭರ್ತಿ ಮಾಡಿ, ನೋಟರಿಯಿಂದ ಅಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ೦೮೨೭೨-೨೯೫೨೯೭ಗೆ ಸಂಪರ್ಕಿಸುವAತೆ ಇಲಾಖೆ ಕೋರಿದೆ.